
ಸ್ಮೃತಿ ಮಂದಾನ ಪಲಾಶ್ ಮುಚ್ಚಲ್
ಗಾಯಕ ಪಲಾಶ್ ಮುಚ್ಛಲ್ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರ ವಿವಾಹ ರದ್ದುಗೊಂಡಿದ್ದು, ಇದಕ್ಕೆ ಮುಚ್ಛಲ್ ಅವರಿಗೆ ಬೇರೊಂದು ಮಹಿಳೆಯೊಂದಿಗೆ ಸಂಬಂಧವೇ ಕಾರಣ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಸಾಮಾಜಿಕ ಮಾಧ್ಯಮದಲ್ಲಿ ಪಲಾಶ್ ಮುಚ್ಛಲ್ ಅವರು ಬೇರೊಂದು ಯುವತಿಯ ಜೊತೆ ಪ್ರಣಯದ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಸ್ಮೃತಿ ಮಂದಾನ ಅವರು ಮುಚ್ಛಲ್ ಅವರ ಜೊತೆಗಿನ ವಿವಾಹ ಪೂರ್ವ ಕಾರ್ಯಕ್ರಮಗಳ ಎಲ್ಲಾ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಿಂದ ಡಿಲೀಟ್ ಮಾಡಿದ್ದಾರೆ.
ತನ್ನೊಂದಿಗೆ ಪಲಾಶ್ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಅಪರಿಚಿತ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದು ವ್ಯಾಪಕವಾಗಿ ಹರಿದಾಡುತ್ತಿದೆ.
ನವೆಂಬರ್ 23ರಂದು ಪಲಾಶ್ ಹಾಗೂ ಮಂದಾನ ವಿವಾಹ ಕಾರ್ಯಕ್ರಮ ರದ್ದುಗೊಳ್ಳುವುದಕ್ಕೆ ಸ್ವಲ್ಪ ಸಮಯದ ಮುನ್ನ ಈ ಸ್ಕ್ರೀನ್‌ಶಾಟ್‌ಗಳು ಹರಿದಾಡಲು ಪ್ರಾರಂಭವಾದವು.
ಆರಂಭದಲ್ಲಿ ಸ್ಮೃತಿ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿವಾಹ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ನಂತರ ಪಲಾಶ್ ಕೂಡ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಯಿತು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳು ಹಾಗೂ ಮಂದಾನ ಡಿಲೀಟ್ ಮಾಡಿರುವ ಪೋಸ್ಟ್‌ಗಳು ಬೇರೆಯದ್ದೇ ಕಥೆ ಹೇಳುತ್ತಿದೆ.
ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ ಕೋಸ್ಟಾ ಎಂದು ಗುರುತಿಕೊಂಡಿರುವ ಮಹಿಳೆ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ, ಪಲಾಶ್ ಅವರನ್ನು ಹೊಗಳಿರುವ ಹಾಗೂ ಕ್ರಿಕೆಟ್ ಆಟಗಾರ್ತಿಯಿಂದ ದೂರವಾಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾತ್ರವಲ್ಲ, ಇಬ್ಬರೂ ಅತ್ಯಂತ ಆತ್ಮೀಯವಾಗಿ, ಪ್ರವಾಸಕ್ಕೆ ಹೋಗುವ ಕುರಿತು, ಮಗು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪಲಾಶ್ ಅವರು ಮಹಿಳೆ ಜೊತೆಗಿನ ಸಂಭಾಷಣೆಯಲ್ಲಿ ಅತ್ಯಂತ ಆತ್ಮೀಯವಾಗಿರುವುದನ್ನು ಕಾಣಬಹುದು. ಸ್ಪಾನಲ್ಲಿ ಭೇಟಿ ಭೇಟಿಯಾಗುವುದು, ಈಜು ಮತ್ತು ಮುಂಬೈನ ವರ್ಸೋವಾ ಬೀಚ್‌ಗೆ ಬೆಳಗಿನ ಜಾವ ಪ್ರವಾಸ ಹೋಗುವುದು ಸೇರಿದಂತೆ ಅತ್ಯಂತ ಸಲುಗೆಯ ಸಂಭಾಷಣೆ ಇರುವುದನ್ನು ಕಾಣಬಹುದು.
ವಿವಾಹ ರದ್ದಾಗಲು ಪಲಾಶ್ ಅವರಿಗೆ ಇದ್ದ ಬೇರೆ ಮಹಿಳೆ ಜೊತೆಗಿನ ಸಂಬಂಧವೇ ಕಾರಣ ಎಂಬ ಮಾತುಗಳೂ ಕೇಳಿಬಂದಿವೆ. ಮದುವೆ ಮುಂದೂಡಿದ ನಂತರ ಪಲಾಶ್ ಅವರು ನಾಪತ್ತೆಯಾಗಿದ್ದಾರೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿದೆ.
ಇದರ ನಡುವೆ ಸ್ಮೃತಿ ಮತ್ತು ಪಲಾಶ್ ಮದುವೆ ನಿಜವಾಗಿಯೂ ಮುರಿದು ಬಿತ್ತೇ ಎಂಬುದಕ್ಕೆ ಎರಡೂ ಕುಟುಂಬಗಳೇ ಸ್ಪಷ್ಟನೆ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.