ADVERTISEMENT

ಯಶ್‌ಪಾಲ್ ಶರ್ಮಾ ನಿಧನ: ಸಾಮಾಜಿಕ ತಾಣಗಳಲ್ಲಿ ಕ್ರಿಕೆಟಿಗನ ಸ್ಮರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2021, 10:27 IST
Last Updated 13 ಜುಲೈ 2021, 10:27 IST
ಹಿರಿಯ ಕ್ರಿಕೆಟಿಗ ಯಶ್‌ಪಾಲ್‌ ಶರ್ಮಾ, ಚಿತ್ರ: @venkateshprasad ಟ್ವಿಟರ್
ಹಿರಿಯ ಕ್ರಿಕೆಟಿಗ ಯಶ್‌ಪಾಲ್‌ ಶರ್ಮಾ, ಚಿತ್ರ: @venkateshprasad ಟ್ವಿಟರ್    

ಬೆಂಗಳೂರು: ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್‌ಪಾಲ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕ್ರಿಕೆಟಿಗ ಯಶ್‌ಪಾಲ್ ಶರ್ಮಾ ನಿಧನಕ್ಕೆ ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ, ವಿವಿಧ ರಂಗದ ಗಣ್ಯರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

ಅಲ್ಲದೆ, ಸಾಮಾಜಿಕ ತಾಣಗಳಲ್ಲಿ ಕೂಡ ಯಶ್‌ಪಾಲ್ ಶರ್ಮಾ ಕುರಿತು ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಯಶ್‌ಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್, ಅನುರಾಗ್ ಠಾಕೂರ್, ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್, ಗೌತಮ್ ಗಂಭೀರ್, ರವಿ ಶಾಸ್ತ್ರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಶಾಂತ್ ಶರ್ಮಾ, ಶಿಖರ್ ಧವನ್, ಜಗತ್ ಪ್ರಕಾಶ್ ನಡ್ಡಾ ಸಹಿತ ಹಲವು ಪ್ರಮುಖರು ಯಶ್‌ಪಾಲ್ ನಿಧನಕ್ಕೆ ಸಂತಾಪ ಸೂಚಿಸಿ, ಟ್ವೀಟ್ ಮಾಡುವ ಮೂಲಕ ಖ್ಯಾತ ಕ್ರಿಕೆಟಿಗನನ್ನು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.