ADVERTISEMENT

ಹೊಸ ಯೋಜನೆ ಮಾಡಲಿರುವೆ ಎಂದ ಸೌರವ್‌: ಗಂಗೂಲಿ ರಾಜೀನಾಮೆ ಕೊಟ್ಟಿಲ್ಲವೆಂದ ಜೈ ಶಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 13:27 IST
Last Updated 1 ಜೂನ್ 2022, 13:27 IST
ಗಂಗೂಲಿ
ಗಂಗೂಲಿ   

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷಸೌರವ್ ಗಂಗೂಲಿ ಅವರು ಬುಧವಾರ ಮಾಡಿದ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 30 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಅವರು ಟ್ವೀಟ್‌ವೊಂದನ್ನು ಮಾಡಿದ್ದು, ‘ನಾನು ಹೊಸದಾಗಿ ಯೋಜನೆಯೊಂದನ್ನು ಹಾಕಿಕೊಳ್ಳುತ್ತಿರುವೆಇದರಿಂದ ಹೆಚ್ಚಿನ ಜನರಿಗೆ ನೆರವಾಗಲಿದೆ ಎಂದು ಭಾವಿಸಿರುವೆ‘ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್ ಟೂರ್ನಿ ಮುಗಿದಮೂರು ದಿನಗಳಲ್ಲಿ ಸೌರವ್ ಗಂಗೂಲಿ ಮಾಡಿರುವ ಟ್ವೀಟ್‌ ಭಾರಿ ಸಂಚಲನ ಸೃಷ್ಟಿಸಿದೆ. ‘ಟ್ವೀಟ್‌‘ ಅವರುರಾಜೀನಾಮೆ ನೀಡಲಿದ್ದಾರೆ ಎಂಬುದನ್ನು ಪುಷ್ಠಿಕರಿಸುವಂತಿದೆ ಎಂದು ಹಲವರು ಹೇಳುತ್ತಿದ್ದಾರೆ.

ADVERTISEMENT

ನನ್ನ ಕ್ರಿಕೆಟ್‌ ವೃತ್ತಿ ಜೀವನಕ್ಕೆ 30 ವರ್ಷಗಳ ಸಂದವು.1992ರಲ್ಲಿ ನನ್ನ ಕ್ರಿಕೆಟ್ ಜೀವನ ಆರಂಭವಾಯಿತು. ಅಂದಿನಿಂದ ಇಲ್ಲಿಯವರೆಗೂ ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನ ವೃತ್ತಿ ಬದುಕಿಗೆಸಹಕರಿಸಿದ, ನಾನು ದೊಡ್ಡ ಮಟ್ಟಕ್ಕೆ ಬೆಳೆಯಲು ಬೆಂಬಲಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ನಾನು ಅಂದುಕೊಂಡಿರುವುದನ್ನು ಪ್ರಾರಂಭ ಮಾಡುತ್ತಿರುವೆ. ಇದು ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂಬ ನಂಬಿಕೆ ನನಗಿದೆ. ಈ ಹೊಸ ಪ್ರಯತ್ನಕ್ಕೆ ನಿಮ್ಮಲ್ಲರ ಬೆಂಬಲ, ಪ್ರೋತ್ಸಾಹ ಹೀಗೆ ಇರಲಿದೆ ಎಂದು ಭಾವಿಸಿರುವೆ‘ – ಸೌರವ್ ಗಂಗೂಲಿ. ಎಂದು ಟ್ವೀಟ್ ಮಾಡಿದ್ದಾರೆ.

ಈ ನಡುವೆ ಬಿಸಿಸಿಐನ ಕಾರ್ಯದರ್ಶಿ ಜೈ ಶಾ ಟ್ವೀಟ್‌ ಮಾಡಿದ್ದು ಸೌರವ್‌ ಗಂಗೂಲಿ ಬಿಸಿಸಿಐಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಸೌರವ್‌ ಗಂಗೂಲಿ ಬಿಜೆಪಿ ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಅಮಿತ್‌ ಶಾ ಅವರು ಸೌರವ್ ಗಂಗೂಲಿ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.