
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ
ಪಿಟಿಐ ಚಿತ್ರ
ಜೋಹಾನ್ಸ್‌ಬರ್ಗ್: ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಚಾಂಪಿಯನ್‌ಶಿಪ್–2025ರ ಫೈನಲ್ ಪಂದ್ಯದ ಬಳಿಕ ವಿಶ್ರಾಂತಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಚೇತರಿಸಿಕೊಂಡಿದ್ದು, ನವೆಂಬರ್ 14ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ತೆಂಬಾ ಬವುಮಾ ಇತ್ತೀಚೆಗೆ ಪಾಕಿಸ್ತಾನದಲ್ಲಿ ಮುಕ್ತಾಯಗೊಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದರು. ಅವರ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಡೇವಿಡ್ ಬೆಡಿಂಗ್‌ಹ್ಯಾಮ್ ಅವರನ್ನು ಭಾರತ ಸರಣಿಯಿಂದ ಕೈಬಿಡಲಾಗಿದೆ.
ಸದ್ಯ, ಭಾರತ ಸರಣಿಗೆ ಪ್ರಕಟಿಸಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಮೂವರು ಪ್ರಮುಖ ಸ್ಪಿನ್ನರ್‌ಗಳಾದ ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಸೆನುರಾನ್ ಮುತ್ತುಸಾಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ವೇಗಿ ಕಗಿಸೊ ರಬಾಡ ಮತ್ತು ಆಲ್‌ರೌಂಡರ್‌ಗಳಾದ ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ಸ್ಥಾನ ಪಡೆದಿದ್ದಾರೆ.
ತೆಂಬಾ ಬವುಮಾ (ನಾಯಕ), ಏಡೆನ್ ಮಾರ್ಕ್‌ರಮ್, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ಡೆವಾಲ್ಡ್ ಬ್ರೆವಿಸ್, ಜುಬೇರ್ ಹಮ್‌ಜಾ, ಟೋನಿ ಡಿ ಜೊರ್ಜಿ, ಕಾರ್ಬಿನ್ ಬಾಷ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹರಾಜ್, ಸೆನುರಾನ್ ಮುತ್ತುಸಾಮಿ, ಕಗಿಸೋ ರಬಾಡ, ಸೈಮನ್ ಹಾರ್ಮರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.