ADVERTISEMENT

ಬಿಸಿಸಿಐಗೆ ಸೈಕಿಯಾ ಕಾರ್ಯದರ್ಶಿ, ಭಾಟಿಯಾ ಖಜಾಂಚಿ; ಸಾಮಾನ್ಯ ಸಭೆಯಲ್ಲಿ ನೇಮಕ

ಪಿಟಿಐ
Published 11 ಜನವರಿ 2025, 10:20 IST
Last Updated 11 ಜನವರಿ 2025, 10:20 IST
ಬಿಸಿಸಿಐ
ಬಿಸಿಸಿಐ   

ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಳಿಯ ಕಾರ್ಯದರ್ಶಿಯಾಗಿ ದೇವಜಿತ್‌ ಸೈಕಿಯಾ ಹಾಗೂ ಖಜಾಂಚಿಯಾಗಿ ಪ್ರಭತೇಜ್‌ ಸಿಂಗ್‌ ಭಾಟಿಯಾ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

ಸಭೆಯು ಮುಂಬೈನಲ್ಲಿ ಭಾನುವಾರ ನಡೆಯಲಿದೆ.

ಬಿಸಿಸಿಐನಲ್ಲಿ ತೆರವಾಗಿದ್ದ ಪ್ರಮುಖ ಸ್ಥಾನಗಳಿಗೆ ಸೈಕಿಯಾ ಮತ್ತು ಭಾಟಿಯಾ ಅವರಷ್ಟೇ ಸ್ಪರ್ಧಿಸಿದ್ದಾರೆ. ಮಂಡಳಿಯ ಚುನಾವಣಾಧಿಕಾರಿ ಮತ್ತು ಭಾರತದ ಮಾಜಿ ಚುನಾವಣಾ ಆಯುಕ್ತ ಅಚಲ್‌ ಕುಮಾರ್ ಅವರು ಪಟ್ಟಿಯನ್ನು ಮಂಗಳವಾರ ಅಂತಿಮಗೊಳಿಸಿದ್ದಾರೆ.

ADVERTISEMENT

ಜಯ್‌ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗಿತ್ತು. ಹೀಗಾಗಿ, ಸೈಕಿಯಾ ಅವರು ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಸಿಸಿಐ ಖಜಾಂಚಿಯಾಗಿದ್ದ ಆಶಿಷ್ ಶೆಲ್ಲಾರ್ ಅವರು ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್‌ ಸಚಿವರಾಗಿದ್ದಾರೆ. ಆದ್ದರಿಂದ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನದಲ್ಲಿ ಭಾಟಿಯಾ ಮುಂದುವರಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.