ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ನವದೆಹಲಿ: ಭಾರತ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು 'ಸ್ಪೋರ್ಟ್ಸ್ ಹರ್ನಿಯಾ' (ಕಿಬೊಟ್ಟೆಯ ಸ್ನಾಯು ದುರ್ಬಲಗೊಳ್ಳುವುದು) ಸಂಬಂಧಿತ ನೋವಿನ ಚಿಕಿತ್ಸೆಗಾಗಿ ತಜ್ಞರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
33 ವರ್ಷದ ಸೂರ್ಯಕುಮಾರ್ ಯಾದವ್ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸೂರ್ಯಕುಮಾರ್ ಯಾದವ್, 700ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು.
ಮುಂಬೈ ಟಿ20 ಲೀಗ್ ಸಂದರ್ಭದಲ್ಲಿ ಸೂರ್ಯ ಅವರಲ್ಲಿ ನೋವು ಉಲ್ಬಣಿಸಿತ್ತೇ ಎಂಬುದು ತಿಳಿದು ಬಂದಿಲ್ಲ. ಕಳೆದ ಮೂರು ತಿಂಗಳಿಂದ ನೋವಿನ ಅರಿವಿಲ್ಲದೆ ಸಕ್ರಿಯ ಕ್ರಿಕೆಟ್‌ನಲ್ಲಿ ನಿರತರಾಗಿದ್ದರು.
ಆಗಸ್ಟ್-ಸೆಪ್ಟೆಂಬರ್ ಅವಧಿಗೂ ಮುನ್ನ ಟಿ20 ಕ್ರಿಕೆಟ್ ಇಲ್ಲದ ಕಾರಣ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸೂರ್ಯಕುಮಾರ್ ಗುಣಮುಖರಾಗಲು ಬೇಕಾದಷ್ಟು ಸಮಯ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.