
ಕಮಿಂದು ಮೆಂಡಿಸ್
(ಐಸಿಸಿ ಚಿತ್ರ)
ಕೊಲಂಬೊ: ಆಲ್‌ರೌಂಡ್ ಆಟ ಆಡಿದ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಎದುರು 20 ರನ್‌ಗಳ ಜಯ ಸಾಧಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡವು ಕುಸಾಲ ಮೆಂಡಿಸ್ (56; 43ಎ, 4x5) ಮತ್ತು ಕಮಿಂದು ಮೆಂಡಿಸ್ (44; 19ಎ, 4x4, 6x2) ಅವರ ಅಮೋಘ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 ರನ್ ಗಳಿಸಿತು.
ಐರ್ಲೆಂಡ್ ತಂಡವು ಮಹೀಷ ತೀಕ್ಷಣ (23ಕ್ಕೆ4) ಹಾಗೂ ವನಿಂದು ಹಸರಂಗಾ (25ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.5 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟ್ ಆಯಿತು. ರಾಸ್ ಅಡೇರ್ (34; 23ಎ, 4x5, 6x1) ಹಾಗೂ ಹ್ಯಾರಿ ಟೆಕ್ಟರ್ (40; 34ಎ, 4x1) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ವೈಫಲ್ಯ ಕಂಡರು.
ಸಂಕ್ಷಿಪ್ತ ಸ್ಕೋರು:
ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 (ಪಥುಮ್ ನಿಸಾಂಕ 24, ಕುಸಾಲ ಮೆಂಡಿಸ್ ಔಟಾಗದೇ 56, ಕಮಿಂದು ಮೆಂಡಿಸ್ 44, ಜಾರ್ಜ್ ಡಾಕ್ರೆಲ್ 17ಕ್ಕೆ2, ಬ್ಯಾರಿ ಮೆಕಾರ್ತಿ 40ಕ್ಕೆ2, ಗೆರೆತ್ ಡೆಲಾನಿ 24ಕ್ಕೆ1)
ಐರ್ಲೆಂಡ್: 19.5 ಓವರ್‌ಗಳಲ್ಲಿ 143 (ರಾಸ್ ಅಡೇರ್ 34, ಹ್ಯಾರಿ ಟೆಕ್ಟರ್ 40; ಮಹೀಷ ತೀಕ್ಷಣ 23ಕ್ಕೆ4, ವನಿಂದು ಹಸರಂಗಾ 25ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.