ಕ್ರಿಕೆಟ್
(ಸಾಂಕೇತಿಕ ಚಿತ್ರ)
ಹರಾರೆ: ಉತ್ತಮ ಲಯದಲ್ಲಿರುವ ಪಥುಮ್ ನಿಸಾಂಕ (55, 32ಎ, 4x4, 6x2) ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬುಧವಾರ ಜಿಂಬಾಬ್ವೆ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.
ಆರಂಭ ಆಟಗಾರ ಬ್ರಯಾನ್ ಬೆನೆಟ್ ಅವರ 81 ರನ್‌ಗಳ (57ಎ, 4x12) ನೆರವಿನಿಂದ ಜಿಂಬಾಬ್ವೆ 20 ಓವರುಗಳಲ್ಲಿ 7 ವಿಕೆಟ್‌ಗೆ 175 ರನ್ ಪೇರಿಸಿತು. ಶ್ರೀಲಂಕಾ ಇನ್ನೂ ಐದು ಎಸೆತಗಳು ಉಳಿದಿರುವಂತೆ 6 ವಿಕೆಟ್‌ಗೆ 177 ರನ್ ಬಾರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.