ದುಬೈ: ಏಷ್ಯಾ ಕಪ್ ಟಿ–20 ಕ್ರಿಕೆಟ್‌ಯ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಅಫ್ಗಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವ ವೇಳೆ ಲಂಕಾ ಕ್ರಿಕೆಟಿಗ ದುನಿತ್ ವೆಲ್ಲಾಳಗೆ ಅವರ ತಂದೆ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಬಂದಿದೆ.
ಬಿ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ ದುನಿತ್ ಅವರ ತಂದೆ ಸುರಂಗಾ ವೆಲ್ಲಾಳಗೆ ನಿಧನರಾಗಿರುವ ಸುದ್ದಿ ಬಂದಿತ್ತು. ಪಂದ್ಯ ಮುಗಿದ ಬಳಿಕ ಲಂಕಾ ಕೋಚ್ ಜಯಸೂರ್ಯ, ದುನಿತ್‌ಗೆ ಮೈದಾನದಲ್ಲಿ ವಿಷಯ ತಿಳಿಸಿದರು.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಜಯಸೂರ್ಯ ಹಾಗೂ ಮ್ಯಾನೇಜರ್ ದುನಿತ್ ಭುಜದ ಮೇಲೆ ಕೈ ಇಟ್ಟು ಸಮಾಧಾನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ದುನಿತ್ ಅವರ ತಂದೆ ಸುರಂಗಾ ಕೂಡ ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರು ರಾಷ್ಟ್ರೀಯ ಟೂರ್ನಿಗಳಿಗೆ ಆಯ್ಕೆಯಾಗಿರಲಿಲ್ಲ ಎಂದು ಲಂಕಾದ ವೀಕ್ಷಕ ವಿವರಣೆಗಾರ ರಸೂಲ್ ಅರ್ನಾಲ್ಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.