
ಕೊಲಂಬೊ: ಮುಂದಿನ ಟಿ–20 ವಿಶ್ವಕಪ್‌ಗೆ ಶ್ರೀಲಂಕಾವು 25 ಆಟಗಾರರ ತಂಡವನ್ನು ಪ್ರಕಟಿಸಿದ್ದು, ದಸುನ್ ಶನಕ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಟಿ–20 ವಿಶ್ವಕಪ್ ಟೂರ್ನಿಯು ಫೆ.7ರಿಂದ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಲಿವೆ. ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡವು ನಾಯಕನ ಬದಲಾವಣೆ ಮಾಡಿದ್ದು, ಚರಿತ ಅಸಲಂಕಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದೆ.
‘ಅಸಲಂಕಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅವರು ಬ್ಯಾಟಿಂಗ್ ಫಾರ್ಮ್ ಕೂಡ ಕಳಪೆಯಾಗಿದೆ. ದಸುನ್ ಶನಕ ಅವರು ಅನುಭವಿಯಾಗಿದ್ದು, 3 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ನಾಯಕತ್ವ ಬದಲಾವಣೆ ಮಾಡಲಾಗಿದೆ ಎಂದು ಶ್ರೀಲಂಕಾ ತಂಡದ ಆಯ್ಕೆದಾರ ಪ್ರಮೋದ್ ವಿಕ್ರಮಸಿಂಘ ತಿಳಿಸಿದ್ದಾರೆ.
ನಾಯಕತ್ವದಿಂದ ಕೆಳಗಿಳಿದರು, ಚರಿತ ಅಸಲಂಕಾ ಅವರು ಬ್ಯಾಟರ್ ಆಗಿ ತಂಡದಲ್ಲಿರಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಇಸ್ಲಾಮಾಬಾದ್‌ನಲ್ಲಿನ 9 ಜನರ ಸಾವಿಗೆ ಕಾರಣವಾಗಿದ್ದ ಬಾಂಬ್ ಸ್ಪೋಟದ ನಂತರ, ಚರಿತ ಅಸಲಂಕಾ ಅವರು ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು.
ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಭಾರತ, ಆಸ್ಟ್ರೇಲಿಯಾ, ಐರ್ಲೆಂಡ್, ಜಿಂಬಾಬ್ವೆ ಹಾಗೂ ಒಮಾನ್ ತಂಡಗಳ ಗುಂಪಿನಲ್ಲಿದೆ.