ADVERTISEMENT

T20 WC| ಶ್ರೀಲಂಕಾ ಜಯಭೇರಿ; ಟೂರ್ನಿಯಿಂದ ಹೊರಬಿದ್ದ ವೆಸ್ಟ್ ಇಂಡೀಸ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 2:06 IST
Last Updated 5 ನವೆಂಬರ್ 2021, 2:06 IST
ಪಥುಮ್ ನಿಸಾಂಕಾ
ಪಥುಮ್ ನಿಸಾಂಕಾ   

ಅಬುಧಾಬಿ: ಶಿಮ್ರಾನ್ ಹೆಟ್ಮೆಯರ್ (ಔಟಾಗದೆ 81; 54 ಎಸೆತ, 8 ಬೌಂಡರಿ, 4 ಸಿಕ್ಸರ್‌) ಮತ್ತು ನಿಕೋಲಸ್ ಪೂರನ್ (46; 34 ಎ, 6 ಬೌಂ, 1 ಸಿ) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಗುರುವಾರ ರಾತ್ರಿ ನಡೆದ ಸೂಪರ್ 12ರ ಹಂತದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡವನ್ನು ಶ್ರೀಲಂಕಾ 20 ರನ್‌ಗಳಿಂದ ಮಣಿಸಿತು.

190 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ ಪರ ಹೆಟ್ಮೆಯರ್ ಮತ್ತು ಪೂರನ್ ಮಾತ್ರ ಉತ್ತಮ ದಿಟ್ಟ ಆಟವಾಡಿದರು. ಕ್ರಿಸ್ ಗೇಲ್ ಸೇರಿದಂತೆ ಎಂಟು ಬ್ಯಾಟರ್‌ಗಳಿಗೆ ಎರಡಂಕಿ ಮೊತ್ತ ದಾಟಲು
ಸಾಧ್ಯವಾಗಲಿಲ್ಲ.

ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಟೂರ್ನಿಯಿಂದ ಹೊರಬಿದ್ದಿತು. 2012 ಮತ್ತು 2016ರಲ್ಲಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್‌ 2010ರ ನಂತರ ಇದೇ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿದೆ ವಾಪಸಾಗುತ್ತಿದೆ.

ADVERTISEMENT

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಥುನ್ ನಿಸಾಂಕಾ ಮತ್ತು ಚರಿತಾ ಅಸಲಂಕಾ ಅವರ ಸುಂದರ ಅರ್ಧಶತಕಗಳ ಬಲದಿಂದ ಶ್ರೀಲಂಕಾ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 189 ರನ್‌ ಗಳಿಸಿತು.

ಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ನಿಸಾಂಕ (51; 41ಎಸೆತ, 5ಬೌಂಡರಿ) ಮತ್ತು ಅಸಲಂಕಾ (68; 41ಎ,8ಬೌಂ,1ಸಿ) ಆಕರ್ಷಕವಾಗಿ ಬ್ಯಾಟಿಂಗ್ ಮಾಡಿದರು. ಎರಡನೇ ವಿಕೆಟ್‌ಗೆ 91 ರನ್‌ ಸೇರಿಸಿದರು. ‌

16ನೇ ಓವರ್‌ನಲ್ಲಿ ನಿಸಾಂಕಾ ಔಟಾದ ನಂತರ ಚರಿತ ಜೊತೆಗೂಡಿದ ದಸುನ್ ಶನಕಾ (ಔಟಾಗದೆ 25; 14ಎ) ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಸೂರೆ ಮಾಡಿದರು.

ಮೂರನೇ ವಿಕೆಟ್ ಜೊತೆಯಾಟದಲ್ಲಿ 46 ರನ್‌ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರು:

ಶ್ರೀಲಂಕಾ: 20 ಓವರ್‌ಗಳಲ್ಲಿ 3ಕ್ಕೆ 189 (ಪಥುಮ್ ನಿಸಾಂಕಾ 51, ಕುಶಾಲ ಪೆರೆರಾ 29, ಚರಿತ ಅಸಲಂಕಾ 68, ದಸುನ್ ಶನಾಕ ಔಟಾಗದೆ 25, ಆ್ಯಂಡ್ರೆ ರಸೆಲ್ 33ಕ್ಕೆ2, ಡ್ವೇನ್ ಬ್ರಾವೊ 42ಕ್ಕೆ1)

ವೆಸ್ಟ್ ಇಂಡೀಸ್‌: 20 ಓವರ್‌ಗಳಲ್ಲಿ 8ಕ್ಕೆ 169 (ಕ್ರಸಿ್ ಗೇಲ್‌ 1, ಎವಿನ್ ಲೂಯಿಸ್ 8, ನಿಕೋಲಸ್ ಪೂರನ್ 46, ರಾಸ್ಟನ್ ಚೇಸ್ 9, ಆ್ಯಂಡ್ರೆ ರಸೆಲ್ 2, ಜೇಸನ್ ಹೋಲ್ಡರ್ 8, ಶಿಮ್ರಾನ್ ಹೆಟ್ಮೆಯರ್ ಔಟಾಗದೆ 81; ಬಿನುರ ಫೆರ್ನಾಂಡೊ 24ಕ್ಕೆ2, ದುಷ್ಮಂತ ಚಮೀರ 41ಕ್ಕೆ1, ಚಮಿಕ ಕರುಣರತ್ನೆ 43ಕ್ಕೆ2, ದಸುನ್ ಶನಕ 18ಕ್ಕೆ1, ವನಿಂದು ಹಸರಂಗ 19ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 20 ರನ್‌ಗಳ ಜಯ. ಪಂದ್ಯಶ್ರೇಷ್ಠ: ಚರಿತ್ ಅಸಲಂಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.