ADVERTISEMENT

ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಯುವರಾಜ್, ಹರ್ಮನ್‌ಪ್ರೀತ್ ಹೆಸರು

ಪಿಟಿಐ
Published 11 ಡಿಸೆಂಬರ್ 2025, 15:40 IST
Last Updated 11 ಡಿಸೆಂಬರ್ 2025, 15:40 IST
<div class="paragraphs"><p>ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಯುವರಾಜ್ ಸಿಂಗ್ ಕುಶಲೋಪರಿ&nbsp;</p></div>

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಯುವರಾಜ್ ಸಿಂಗ್ ಕುಶಲೋಪರಿ 

   

–ಪಿಟಿಐ ಚಿತ್ರ

ಮುಲ್ಲನಪುರ: ವಿಶ್ವಕಪ್ ವಿಜೇತ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಹೆಸರುಗಳನ್ನು ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲಾಯಿತು. 

ADVERTISEMENT

ಪಂಜಾಬ್‌ ರಾಜ್ಯದ ಯುವರಾಜ್ ಸಿಂಗ್ ಅವರು 2011ರಲ್ಲಿ ವಿಶರ್ವಕಪ್ ಜಯಿಸಿದ ತಂಡದಲ್ಲಿ ಆಡಿದ್ದರು. ಟೂರ್ನಿಯ ಶ್ರೇಷ್ಠ ಆಟಗಾರನ ಗೌರವ ಗಳಿಸಿದ್ದರು. ಹರ್ಮನ್‌ಪ್ರೀತ್ ಕೌರ್ ಅವರು ಈಚೆಗೆ ಚೊಚ್ಚಲ ಮಹಿಳಾ ವಿಶ್ವಕಪ್ ಜಯಿಸಿದ್ದ ತಂಡದ ನಾಯಕಿಯಾಗಿದ್ದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸ್ಟ್ಯಾಂಡ್‌ ನಾಮಫಲಕಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಯುವರಾಜ್ ಮತ್ತು ಹರ್ಮನ್ ಅವರ ಕುಟುಂಬಗಳ ಸದಸ್ಯರು ಹಾಜರಿದ್ದರು. 

ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಲು ಸಿದ್ಧವಾಗಿದ್ದ ಭಾರ ತಂಡದ ಆಟಗಾರರೊಂದಿಗೆ ಯುವರಾಜ್ ಚುಟುಕು ಸಂವಾದ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.