ADVERTISEMENT

ಟಿ–20 ಕ್ರಿಕೆಟ್‌ | 600 ವಿಕೆಟ್‌: ಸುನಿಲ್ ನಾರಾಯಣ್ ಮೈಲಿಗಲ್ಲು

ಪಿಟಿಐ
Published 5 ಡಿಸೆಂಬರ್ 2025, 20:23 IST
Last Updated 5 ಡಿಸೆಂಬರ್ 2025, 20:23 IST
ಸುನಿಲ್ ನಾರಾಯಣ್
ಸುನಿಲ್ ನಾರಾಯಣ್   

ಅಬುಧಾಬಿ: ಸ್ಪರ್ಧಾತ್ಮಕ ಟಿ–20 ಕ್ರಿಕೆಟ್‌ನಲ್ಲಿ 600 ವಿಕೆಟ್‌ ಪಡೆದ ವಿಶ್ವದ ಮೊದಲ ಬೌಲರ್‌ ಎಂಬ ಶ್ರೇಯಕ್ಕೆ ವೆಸ್ಟ್‌ ಇಂಡೀಸ್‌ನ ಮಾಂತ್ರಿಕ ಸ್ಪಿನ್ನರ್‌ ಸುನಿಲ್ ನಾರಾಯಣ್ ಪಾತ್ರರಾಗಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ವಿಶ್ವ ಇಂಟರ್‌ನ್ಯಾಷನಲ್‌ ಲೀಗ್ ಟಿ20 (ಐಎಲ್‌ಟಿ20) ಟೂರ್ನಿಯಲ್ಲಿ ಅಬುಧಾಬಿ ನೈಟ್‌ ರೈಡರ್ಸ್‌ ತಂಡದ ಪರ ಆಡುತ್ತಿರುವ ಅವರು, ಬುಧವಾರ ಶಾರ್ಜಾ ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಮ್‌ ಅಬೆಲ್‌ ಅವರ ವಿಕೆಟ್‌ ಪಡೆಯುವುದರೊಂದಿಗೆ ಈ ಮೈಲಿಗಲ್ಲು ಸಾಧಿಸಿದ್ದಾರೆ.

37 ವರ್ಷ ವಯಸ್ಸಿನ ಟ್ರಿನಿಡಾಡ್‌ನ ಆಟಗಾರ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ಹಾಗೂ ಅಮೆರಿಕದ ಮೇಜರ್‌ ಕ್ರಿಕೆಟ್‌ ಲೀಗ್‌ನಲ್ಲಿ ಲಾಸ್ ಏಂಜಲೀಸ್‌ ನೈಟ್‌ ರೈಡರ್ಸ್ ತಂಡಗಳ ಪರ ಒಟ್ಟು 568 ಪಂದ್ಯಗಳನ್ನು ಆಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.