ADVERTISEMENT

ಸಿಡ್ನಿ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲು: ಕೈತಪ್ಪಿದ ಬಾರ್ಡರ್–ಗವಾಸ್ಕರ್‌ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 3:55 IST
Last Updated 5 ಜನವರಿ 2025, 3:55 IST
<div class="paragraphs"><p>ಆಸ್ಟ್ರೇಲಿಯಾ ತಂಡ&nbsp;</p></div>

ಆಸ್ಟ್ರೇಲಿಯಾ ತಂಡ 

   

– ರಾಯಿಟರ್ಸ್ ಚಿತ್ರ

ಸಿಡ್ನಿ: ಬಾರ್ಡರ್ ಗಾವಾಸ್ಕರ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಭಾರತ ನೀಡಿದ 162 ರನ್ ಗುರಿಯನ್ನು ನಾಲ್ಕು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಬೆನ್ನಟ್ಟಿತು.

ADVERTISEMENT

ಆ ಮೂಲಕ 5 ಪಂದ್ಯಗಳ ಸರಣಿಯನ್ನು 3–1 ಅಂತರದಿಂದ ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತು.

ಎರಡನೇ ಇನಿಂಗ್ಸ್‌ನಲ್ಲಿ ಜಸ್ಪ್ರೀತ್‌ ಬೂಮ್ರಾ ಬೌಲಿಂಗ್ ಮಾಡದೇ ಇದ್ದದ್ದು, ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಆರಂಭಿಕ ವಿಕೆಟ್‌ಗಳನ್ನು ಕೀಳುವ ಮೂಲಕ ಕನ್ನಡಿಗ ಪ್ರಸಿದ್ಧ ಕೃಷ್ಣ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದರಾದರೂ, ಆಸ್ಟ್ರೇಲಿಯಾ ಬ್ಯಾಟರ್‌ಗಳು ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಎರಡನೇ ದಿನದಾಟಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್‌ ಗಳಿಸಿದ್ದ ಭಾರತ ಆ ಮೊತ್ತಕ್ಕೆ 16 ರನ್‌ ಸೇರಿಸಿ ಆಲೌಟ್ ಆಗಿ, ಆಸ್ಟ್ರೇಲಿಯಾಗೆ 162 ರನ್‌ಗಳ ಗುರಿ ನೀಡಿತು. ಆರಂಭದಲ್ಲಿ ಆಸೀಸ್ ಬ್ಯಾಟರ್‌ಗಳು ಸುಲಭವಾಗಿ ಗೆಲ್ಲುವ ಮುನ್ಸೂಚನೆ ನೀಡಿದರು. ಆದರೆ ಅವರಿಗೆ ಪ್ರಸಿದ್ಧ ಕೃಷ್ಣ ಮೂಗುದಾರ ಹಾಕಿದರು.

ಕೃಷ್ಣ 3 ಹಾಗೂ ಸಿರಾಜ್ ಒಂದು ವಿಕೆಟ್ ಕಿತ್ತರು.

ಬೆನ್ನು ನೋವಿನಿಂದ ಸ್ಕ್ಯಾನಿಂಗ್‌ಗೆ ಒಳಗಾಗಿದ್ದ ಬೂಮ್ರಾ, ಬ್ಯಾಟಿಂಗ್‌ ಮಾಡಿದರಾದರೂ ಬೌಲಿಂಗ್‌ ಮಾಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.