
ರಶೀದ್ ಖಾನ್
ಕಾಬೂಲ್ (ಎಎಫ್‌ಪಿ): ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು ಈ ವರ್ಷದ ಫೆಬ್ರುವರಿ 8ರಂದು ಆರಂಭವಾಗುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಅಫ್ಗಾನಿಸ್ತಾನ ತಂಡಕ್ಕೆ ನಾಯಕರಾಗಿದ್ದಾರೆ.
15 ಮಂದಿಯ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಈ ವಿಶ್ವಕಪ್ ನಡೆಯಲಿದೆ. ಫೆ. 8ರಂದು ನ್ಯೂಜಿಲೆಂಡ್ ವಿರುದ್ಧ ಚೆನ್ನೈನಲ್ಲಿ ಆಡುವ ಮೂಲಕ ಅಫ್ಗಾನಿಸ್ತಾನ ಅಭಿಯಾನ ಆರಂಭಿಸಲಿದೆ.
ರಶೀದ್ ಅವರ ಸ್ಪಿನ್ ಜೊತೆಗಾರರಾದ ಮುಜೀಬ್ ಉರ್ ರಹಮಾನ್ ಮತ್ತು ವೇಗದ ಬೌಲರ್ ಫಜಲಖ್ ಫಾರೂಕಿ ತಂಡಕ್ಕೆ ಮರಳಿದ್ದಾರೆ.
ಈ ಹಿಂದಿನ ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ ಸೆಮಿಫೈನಲ್ ತಲುಪಿತ್ತು. ಆ ಹಾದಿಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿತ್ತು.
ತಂಡ ಹೀಗಿದೆ:
ರಶೀದ್ ಖಾನ್ (ನಾಯಕ), ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಝ್, ಮೊಹಮ್ಮದ್ ಇಶಾಖ್, ಸೆದಿಖುಲ್ಲಾ ಅಟಲ್, ದರ್ವೀಶ್ ರಸೂಲಿ, ಶಾಹಿದುಲ್ಲಾ ಕಮಾಲ್, ಅಜ್ಮತ್‌ಉಲ್ಲಾ ಒಮರ್‌ಝೈ, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಫಝಲಕ್ ಫಾರೂಖಿ, ಅಬ್ದುಲ್ಲಾ ಅಹ್ಮದ್‌ಝೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.