
ಜಿಂಬಾಬ್ವೆ ತಂಡದ ಬ್ರಿಯಾನ್ ಬೆನೆಟ್
ಕೊಲಂಬೊ: ಬೌಲರ್‌ಗಳ ಪರಿಣಾಮಕಾರಿ ದಾಳಿಯ ಬಳಿಕ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅವರ ಬ್ಯಾಟಿಂಗ್ ಬಲದಿಂದ ಜಿಂಬಾಬ್ವೆ ತಂಡವು ಸೋಮವಾರ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಒಮಾನ್ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಅನನುಭವಿ ಒಮಾನ್ ತಂಡವು ರಿಚರ್ಡ್ ನ್ಗರವಾ (17ಕ್ಕೆ 3), ಬ್ಲೇಸಿಂಗ್ ಮುಜರಬಾನಿ (16ಕ್ಕೆ 3) ಮತ್ತು ಬ್ರಾಡ್ ಇವಾನ್ಸ್ (18ಕ್ಕೆ 3) ದಾಳಿಗೆ ತತ್ತರಿಸಿತು.
27 ರನ್‌ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸುಫ್ಯಾನ್ ಮೊಹಮೂದ್ (25) ಮತ್ತು ವಿನಾಯಕ್ ಶುಕ್ಲಾ (28) ಕೊಂಚ ಆಸರೆಯಾದರು. ಕೊನೆಯ ಹಂತದಲ್ಲಿ ನದೀಂ ಖಾನ್ (20) ಹೋರಾಟ ನಡೆಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 19.5 ಓವರ್‌ಗಳಲ್ಲಿ 103 ರನ್ ಗಳಿಸಿತು.
ಸುಲಭ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡವು 39 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ಗೆ 106 ರನ್ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬ್ರಿಯಾನ್ ಅವರು 36 ಎಸೆತಗಳಲ್ಲಿ ಔಟಾಗದೇ 48 ರನ್ ಗಳಿಸಿದರು. ಬ್ರಿಯಾನ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಬ್ರೆಂಡನ್ ಟೇಲರ್ (31) ಅವರೊಂದಿಗೆ 68 ರನ್ ಸೇರಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಜಯಕ್ಕೆ ಆರು ರನ್ ಬೇಕಿದ್ದಾಗ ಬ್ರೆಂಡನ್ ಅವರು ಗಾಯಾಳಾಗಿ ನಿವೃತ್ತರಾದರು. ನಂತರದಲ್ಲಿ ನಾಯಕ ಸಿಕಂದರ್ ರಜಾ (ಔಟಾಗದೇ 5) ಗೆಲುವಿನ ಔಪಚಾರ ಪೂರೈಸಿದರು.
ಒಮಾನ್: 19.5 ಓವರ್‌ಗಳಲ್ಲಿ 103 (ವಿನಾಯಕ ಶುಕ್ಲಾ 28, ರಿಚರ್ಡ್ ನ್ಗರವಾ 17ಕ್ಕೆ 3, ಬ್ಲೇಸಿಂಗ್ ಮುಜರಬಾನಿ 16ಕ್ಕೆ 3, ಬ್ರಾಡ್ ಇವಾನ್ಸ್ 18ಕ್ಕೆ 3.
ಜಿಂಬಾಬ್ವೆ: 13.3 ಓವರ್‌ಗಳಲ್ಲಿ 2 ವಿಕೆಟ್‌ಗೆ 106 (ಬ್ರಿಯಾನ್ ಬೆನೆಟ್ ಔಟಾಗದೇ 48; ಸುಫ್ಯಾನ್ ಮೊಹಮೂದ್ 12ಕ್ಕೆ 2).
ಫಲಿತಾಂಶ: ಜಿಂಬಾಬ್ವೆಗೆ ಎಂಟು ವಿಕೆಟ್‌ಗಳ ಜಯ.
ಪಂದ್ಯದ ಆಟಗಾರ: ಬ್ಲೇಸಿಂಗ್ ಮುಜರಬಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.