ADVERTISEMENT

World Cup: ಚುಟುಕು ವಿಶ್ವಕಪ್‌ಗೆ ಚಾಲನೆ; ಚಿತ್ರಮಂದಿರದಲ್ಲಿ ಕ್ರಿಕೆಟ್ ನೋಡಬಹುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 6:08 IST
Last Updated 7 ಫೆಬ್ರುವರಿ 2026, 6:08 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಇಂದಿನಿಂದ(ಫೆ.7) ಟಿ–20 ವಿಶ್ವಕಪ್ ಆರಂಭವಾಗಿದೆ.

ಹಲವು ವಿವಾದಗಳ ನಡುವೆಯೇ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ. ಮೊದಲ ದಿನವೇ 3 ಪಂದ್ಯಗಳು ಆಯೋಜನೆಗೊಂಡಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಮೆರಿಕ ವಿರುದ್ಧ ಆಡಲಿದೆ.

ADVERTISEMENT

ಈ ಬಾರಿ ಟೂರ್ನಿಯು ಫೆ.7 ರಿಂದ ಮಾರ್ಚ್ 8ರವರೆಗೆ ನಡೆಯಲಿದೆ. 20 ತಂಡಗಳು ಕಣಕ್ಕಿಳಿದಿದ್ದು, ಒಟ್ಟು 55 ಪಂದ್ಯಗಳು ಜರುಗಲಿವೆ. ಭಾರತವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಪಂದ್ಯಗಳ ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್‌ ವಾಹಿನಿಯಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ. ಜಿಯೋ ಹಾಟ್‌ಸ್ಟಾರ್‌ ಅಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ವೀಕ್ಷಕ ವಿವರಣೆ ಲಭ್ಯವಿದೆ. ಒಟಿಟಿಯಲ್ಲಿ ಆ ಐದು ಭಾಷೆಗಳ ಜತೆಗೆ ಬಂಗಾಳಿ, ಭೋಜಪುರಿ, ಹರಿಯಾಣಿ ಭಾಷೆಯಲ್ಲೂ ಪಂದ್ಯಗಳನ್ನು ನೋಡಬಹುದಾಗಿದೆ. ಮರಾಠಿ ಭಾಷೆಯಲ್ಲಿ ಭಾರತದ ಪಂದ್ಯಗಳನ್ನು ಮಾತ್ರ ವೀಕ್ಷಿಸಬಹುದಾಗಿದೆ.

ಚಿತ್ರಮಂದಿರದಲ್ಲಿ ಕ್ರಿಕೆಟ್ ನೋಡಬಹುದು..: ಈ ಬಾರಿಯ ಟಿ–20 ವಿಶ್ವಕಪ್‌ ಪಂದ್ಯಗಳನ್ನು ಚಿತ್ರಮಂದಿರಗಳಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಪಿವಿಆರ್ – ಐನಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಆಯ್ದ ಚಿತ್ರಮಂದಿರಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.