
ಟಿ20 ವಿಶ್ವಕಪ್ ಟ್ರೋಫಿ
ಚಿತ್ರ: ಐಸಿಸಿ
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ನೇ ಸಾಲಿನ ಟಿ20ಐ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಇದುವರೆಗೂ ಐಸಿಸಿ ರ‍್ಯಾಂಕಿಂಗ್ ಆಧಾರದ ಮೇಲೆ 10 ತಂಡಗಳು ಮಾತ್ರ ಭಾಗವಹಿಸುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸುತ್ತಿವೆ.
ಭಾರತ ಮತ್ತು ಶ್ರೀಲಂಕಾ ತಂಡಗಳು ಆಯೋಜಕರಾಗಿರುವುದರಿಂದ ನೇರ ಅರ್ಹತೆ ಪಡೆದಕೊಂಡಿವೆ. 2024ರ ವಿಶ್ವಕಪ್‌ನಲ್ಲಿ ಅಗ್ರ 7 ಸ್ಥಾನಗಳನ್ನು ಪಡೆದ ಎಲ್ಲಾ 7 ತಂಡಗ ನೇರ ಅರ್ಹತೆ ಪಡೆದಿವೆ. ಜೊತೆಗೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಟಿ-20ಐ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿರುವ ಐರ್ಲೆಂಡ್, ಪಾಕಿಸ್ಥಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಹ ನೇರ ಅರ್ಹತೆ ಪಡೆದುಕೊಂಡಿವೆ.
ಉಳಿದ 8 ಸ್ಥಾನಗಳಿಗಾಗಿ ನಡೆದ ಅರ್ಹತಾ ಸುತ್ತುಗಳಲ್ಲಿ ಅಮೆರಿಕಾದಿಂದ ಒಂದು ತಂಡ, ಆಫ್ರಿಕಾ ಮತ್ತು ಯೂರೋಪ್‌ನಿಂದ ತಲಾ ಎರಡು ತಂಡಗಳು. ಏಷ್ಯಾ ಮತ್ತು ಪ್ಯಾಸಿಫಿಕ್‌ನಿಂದ ಮೂರು ತಂಡಗಳು ಅರ್ಹತಾ ಸುತ್ತುಗಳ ಮೂಲಕ ಅಯ್ಕೆಯಾಗಿವೆ. ಸದ್ಯ, ಟಿ20 ವಿಶ್ವಕಪ್ ಆಡಲಿರುವ 20 ತಂಡಗಳು ಯಾವುವು ಎಂಬುದು ಖಚಿತವಾಗಿವೆ.
ಇನ್ನೂ ಇತ್ತೀಚೆಗಿನ ಭಾರತದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡದ ಬದಲು ಸ್ಕಾಟ್‌ಲ್ಯಾಂಡ್ ತಂಡಕ್ಕೆ ಟೂರ್ನಿಯಲ್ಲಿ ಅವಕಾಶ ನೀಡಲಾಗಿದೆ. ಆ ತಂಡ ಗ್ರೂಪ್ ಸಿ ಯಲ್ಲಿ ಅವಕಾಶ ಪಡೆದುಕೊಂಡಿದೆ.
ಗ್ರೂಪ್ ಎ
ಭಾರತ
ಅಮೆರಿಕ
ಪಾಕಿಸ್ತಾನ
ನೆದರ್‌ಲ್ಯಾಂಡ್
ನಮಿಬಿಯಾ
ಗ್ರೂಪ್ ಬಿ
ಆಸ್ಟ್ರೇಲಿಯಾ
ಐರ್ಲೆಂಡ್
ಶ್ರೀಲಂಕಾ
ಜಿಂಬಾಂಬ್ವೆ
ಓಮಾನ್
ಗ್ರೂಪ್ ಸಿ
ಇಂಗ್ಲೆಂಡ್
ವೆಸ್ಟ್ ಇಂಡೀಸ್
ಸ್ಕಾಟ್‌ಲ್ಯಾಂಡ್
ನೇಪಾಳ
ಇಟಲಿ
ಗ್ರೂಪ್ ಡಿ
ನ್ಯೂಜಿಲೆಂಡ್
ದಕ್ಷಿಣ ಆಫ್ರಿಕಾ
ಅಫ್ಗಾನಿಸ್ತಾನ
ಕೆನಡ
ಯುಎಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.