ADVERTISEMENT

ಕರ್ನಾಟಕ ಚೊಚ್ಚಲ ರಣಜಿ ಜಯಕ್ಕೆ 50: ಬಿಐಸಿಯಲ್ಲಿ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:19 IST
Last Updated 7 ಏಪ್ರಿಲ್ 2024, 15:19 IST
ಇ.ಎ.ಎಸ್. ಪ್ರಸನ್ನ
ಇ.ಎ.ಎಸ್. ಪ್ರಸನ್ನ   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ಮೊದಲ ಬಾರಿ ರಣಜಿ ಟ್ರೋಫಿ ಜಯಿಸಿದ ಸಾಧನೆಗೆ ಈಗ 50 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿ.ಐ.ಸಿ)ದಲ್ಲಿ ಮಂಗಳವಾರ  ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

1974ರಲ್ಲಿ ರಣಜಿ ಟ್ರೋಫಿ ಜಯಿಸಿದ ಕರ್ನಾಟಕ ತಂಡದ ನಾಯಕರಾಗಿದ್ದ ಎರ್ರಪಳ್ಳಿ ಪ್ರಸನ್ನ, ಆರಂಭಿಕ ಬ್ಯಾಟರ್ ಆಗಿದ್ದ ಸಂಜಯ್ ದೇಸಾಯಿ, ಕ್ರಿಕೆಟ್ ಲೇಖಕ ಸುರೇಶ್ ಮೆನನ್ ಹಾಗೂ ಕ್ರೀಡಾ ಪತ್ರಕರ್ತೆ ಶಾರದಾ ಉಗ್ರಾ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. 

ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.  

ADVERTISEMENT

ಮಂಗಳವಾರ (ಏ. 9) ಸಂಜೆ 6.30 ರಿಂದ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಉಚಿತ ಪ್ರವೇಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ bic@bangaloreinternationalcentre.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.