ADVERTISEMENT

ಲಂಡನ್‌ನಲ್ಲಿ ಧೋನಿ ಜತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ಐಎಎನ್ಎಸ್
Published 17 ಜುಲೈ 2022, 7:41 IST
Last Updated 17 ಜುಲೈ 2022, 7:41 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.

ಜುಲೈ 7ರಂದು ಧೋನಿ ಅವರು ಲಂಡನ್‌ನಲ್ಲಿ ತಮ್ಮ ಆಪ್ತ ಗೆಳೆಯರ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಜತೆಗೆ, ಇಂಗ್ಲೆಂಡ್ ಮತ್ತು ಭಾರತ ನಡುವಣ ಪಂದ್ಯ ವೀಕ್ಷಣೆಗೂ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ಧೋನಿ ಅಭಿಮಾನಿಗಳು ಅವರನ್ನು ಕಂಡು ಪುಳಕಿತರಾಗಿದ್ದರು.

ADVERTISEMENT

ಪ್ರವಾಸದ ಸಂದರ್ಭದಲ್ಲಿ ಧೋನಿ ಅವರು ಹೊರಗಡೆ ಹೋಗಿದ್ದಾಗ ಅವರನ್ನು ಅಭಿಮಾನಿಗಳು ಮುತ್ತಿಕೊಂಡು ಸೆಲ್ಫಿ ಕೇಳಿದ್ದಾರೆ.

ಲಂಡನ್‌ನಲ್ಲಿ ಧೋನಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸಿದ ಅಭಿಮಾನಿಗಳು, ಭದ್ರತಾ ಸಿಬ್ಬಂದಿ ಬಳಿ ಧೋನಿ ಜತೆ ಸೆಲ್ಫಿಗಾಗಿ ಕೋರಿಕೆ ಸಲ್ಲಿಸಿದ್ದಾರೆ.

ಸಕ್ರಿಯ ಕ್ರಿಕೆಟ್‌ನಲ್ಲಿ ಇಲ್ಲದಿದ್ದರೂ, ಧೋನಿ ಅವರ ಅಭಿಮಾನಿ ಬಳಗ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.