ADVERTISEMENT

ಟೀಂ ಇಂಡಿಯಾ ವೈಫಲ್ಯ: ಕೋಚ್ ಪರ ಇವರದ್ದು ’ಗಂಭೀರ‘ ಬ್ಯಾಟಿಂಗ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2025, 12:52 IST
Last Updated 25 ನವೆಂಬರ್ 2025, 12:52 IST
ಗೌತಮ್‌ ಗಂಭೀರ್
ಗೌತಮ್‌ ಗಂಭೀರ್   

ನವದೆಹಲಿ: ಸಾಲು ಸಾಲು ಸೋಲುಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮಾಜಿ ಬ್ಯಾಟರ್ ಸುರೇಶ್ ರೈನಾ ಬೆಂಬಲಿಸಿದ್ದಾರೆ.

‘ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಸಹಾಯಕ ಸಿಬ್ಬಂದಿ ಕಾರಣ ಎಂದು ಹೇಳಲಾಗುವುದಿಲ್ಲ. ಪಂದ್ಯದ ಫಲಿತಾಂಶಗಳಿಗೆ ಆಟಗಾರರು ಜವಾಬ್ದಾರರಾಗಿರಬೇಕು’ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ವೈಟ್‌ವಾಶ್‌ಗೆ ಒಳಗಾಗಿತ್ತು. ಇದೀಗ ಮತ್ತೊಮ್ಮೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಸೋಲಿನ ಸುಳಿಗೆ ಸಿಲುಕಿದೆ.

ADVERTISEMENT

‘ಗೌತಿ ಭಯ್ಯಾ ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಪಂದ್ಯಗಳ ಸೋಲಿನಲ್ಲಿ ಅವರ ತಪ್ಪೇನೂ ಇಲ್ಲ. ಆಟಗಾರರು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಉತ್ತಮವಾಗಿ ಆಡಬೇಕು. ಗಂಭಿರ್ ಅಡಿಯಲ್ಲಿ ನಾವು ವೈಟ್ ಬಾಲ್ ಸ್ವರೂಪದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದಿದ್ದೇವೆ’ ಎಂದು ರೈನಾ ಪಿಟಿಐಗೆ ತಿಳಿಸಿದ್ದಾರೆ.

‘ಆಟಗಾರರು ಏನು ಮಾಡಬೇಕು ಎಂಬ ಗೋಲು ಹೊಂದಿರಬೇಕು. ತರಬೇತುದಾರರು ಆಟಗಾರರಿಗೆ ಮಾರ್ಗದರ್ಶನ, ಸಲಹೆ ಮತ್ತು ಬೆಂಬಲ ನೀಡಬಲ್ಲರು’ ಎಂದು ಅವರು ಇಂಡಿಯನ್ ಸಾಫ್ಟ್‌ಬಾಲ್ ಕ್ರಿಕೆಟ್ ಲೀಗ್‌ನ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ರಾಯಭಾರಿಯಾಗಿ ಆಗಮಿಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.