ADVERTISEMENT

Asia cup: ಪಾಕಿಸ್ತಾನ ತಂಡದ ಎದುರು 2ನೇ ಬಾರಿ ಗರಿಷ್ಠ 356 ರನ್‌ ದಾಖಲಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 13:45 IST
Last Updated 11 ಸೆಪ್ಟೆಂಬರ್ 2023, 13:45 IST
<div class="paragraphs"><p>ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಆಟದ ಭಂಗಿ</p></div>

ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಆಟದ ಭಂಗಿ

   

ಪಿಟಿಐ ಚಿತ್ರ

ಕೊಲೊಂಬೊ: ಪಾಕಿಸ್ತಾನ ತಂಡದ ವಿರುದ್ಧ ಆಡುತ್ತಿರುವ ಭಾರತ ಈ ಬಾರಿ ಏಷ್ಯಾ ಕಪ್‌ನಲ್ಲಿ 356 ರನ್‌ಗಳ ಗರಿಷ್ಠ ರನ್‌ ದಾಖಲಿಸಿದೆ. ಆ ಮೂಲಕ ಪಾಕಿಸ್ತಾನ ವಿರುದ್ಧ ಭಾರತ ತಂಡ 2ನೇ ಬಾರಿ ಗರಿಷ್ಠ ರನ್ ದಾಖಲಿಸಿದೆ.

ADVERTISEMENT

ಇಲ್ಲಿನ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಸರಣಿಯ ಭಾರತ–ಪಾಕಿಸ್ತಾನ ನಡುವಿನ ಸೂಪರ್–4 ಹಂತದ ಪಂದ್ಯದಲ್ಲಿ ಶತಕ ಸಿಡಿಸಿದ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರ ಜತೆಯಾಟದಿಂದಾಗಿ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್‌ಗಳನ್ನು ಕಲೆ ಹಾಕಿತು.

2005ರ ಏಪ್ರಿಲ್ 5ರಂದು ವಿಶಾಕಪಟ್ಟಣದಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 356 ರನ್ ಕಲೆ ಹಾಕಿತ್ತು. 2004ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 349 ರನ್ ದಾಖಲಿಸಿತ್ತು. 2019ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ 336/5 ದಾಖಲಿಸಿತ್ತು.

ಆ ಮೂಲಕ ಭಾರತ ತಂಡವು ಈವರೆಗೂ 15 ಬಾರಿ 300ಕ್ಕೂ ಹೆಚ್ಚು ರನ್‌ಗಳನ್ನು ಪಾಕಿಸ್ತಾನ ತಂಡದ ವಿರುದ್ಧ ದಾಖಲಿಸಿದೆ. ಆದರೆ ಅದರಲ್ಲಿ ಅತಿ ಕಡಿಮೆ ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ದಾಖಲಿಸಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.