ಲಾರಾ ಮತ್ತು ವಿಯಾನ್ ಮುಲ್ಡರ್
ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವೆಸ್ಟ್ ಇಂಡೀಸ್‌ನ ಲಾರಾ ಹೆಸರಲ್ಲಿದೆ. ಅವರು 2004ರಲ್ಲಿ ಆಸ್ಟ್ರೇಲಿಯಾದ ಎದುರಿನ ಟೆಸ್ಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 400 ರನ್ ಹೊಡೆದಿದ್ದರು. ಇದೀಗ ಈ ದಾಖಲೆಗೆ ಕುತ್ತು ಬರುವ ಸಾಧ್ಯತೆ ಎದುರಾಗಿದೆ.
ದಕ್ಷಿಣ ಆಫ್ರಿಕಾದ ಪೀಟರ್ ವಿಲ್ಲೆಮ್ ಆಡ್ರಿಯನ್ ಮುಲ್ಡರ್ (ವಿಯಾನ್ ಮುಲ್ಡರ್) ಈ ದಾಖಲೆ ಮುರಿಯುವತ್ತ ದಾಪುಗಾಲು ಇಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆ ಜಿಂಬಾಬ್ವೆಯ ಬುಲವಾಯೊದಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ವಿಯಾನ್ ಮುಲ್ಡರ್ ವನ್‌ಡೌನ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದು, ಎರಡನೇ ದಿನದ ಊಟದ ವಿರಾಮದ ಹೊತ್ತಿಗೆ 367 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇನ್ನು 34 ರನ್ ಗಳಿಸಿದರೆ ಲಾರಾ ಅವರ ದಾಖಲೆ ದೂಳಿಪಟ ಆಗಲಿದೆ.
ವಿಯಾನ್ ಮುಲ್ಡರ್ ಅವರ ತ್ರಿಶತಕದ ನೆರವಿನಿಂದಾಗಿ ದಕ್ಷಿಣ ಆಫ್ರಿಕಾವು ಈಗಾಗಲೇ 114 ಓವರ್‌ಗಳಲ್ಲಿ 626 ರನ್‌ಗಳನ್ನು ಪೇರಿಸಿದೆ. ಮುಲ್ಡರ್ ಕೇವಲ 334 ಎಸೆತಗಳಲ್ಲಿ 367 ರನ್ ಗಳಿಸಿ ಆಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.