ADVERTISEMENT

ನ್ಯೂಜಿಲೆಂಡ್ ವಿರುದ್ಧ ಭಾರತ ಮೇಲುಗೈ: ಶಾರ್ದೂಲ್, ಕುಲದೀಪ್ ಬೌಲಿಂಗ್‌ಗೆ ಒಲಿದ ಜಯ

ಪಿಟಿಐ
Published 22 ಸೆಪ್ಟೆಂಬರ್ 2022, 16:03 IST
Last Updated 22 ಸೆಪ್ಟೆಂಬರ್ 2022, 16:03 IST
ವಿಕೆಟ್ ಗಳಿಸಿದ ಶಾರ್ದೂಲ್ ಠಾಕೂರ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಪಿಟಿಐ ಚಿತ್ರ
ವಿಕೆಟ್ ಗಳಿಸಿದ ಶಾರ್ದೂಲ್ ಠಾಕೂರ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಪಿಟಿಐ ಚಿತ್ರ   

ಚೆನ್ನೈ: ಮಧ್ಯಮವೇಗಿ ಶಾರ್ದೂಲ್ ಠಾಕೂರ್ಹಾಗೂ ಕುಲದೀಪ್ ಸೇನ್ ಅವರ ಉತ್ತಮ ಬೌಲಿಂಗ್ ಬಲದಿಂದ ಭಾರತ ಎ ತಂಡವು ಗುರುವಾರ ಇಲ್ಲಿ ನಡೆದ ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಶಾರ್ದೂಲ್ (32ಕ್ಕೆ4) ಹಾಗೂ ಕುಲದೀಪ್ (30ಕ್ಕೆ3) ಅವರ ದಾಳಿಗೆ ನ್ಯೂಜಿಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಆದರೆ, ಎಂಟನೇ ಕ್ರಮಾಂಕದ ಮಿಚೆಲ್ ರಿಪೊನ್ (61; 104ಎ, 4X4) ತಾಳ್ಮೆಯ ಬ್ಯಾಟಿಂಗ್ ಬಲದಿಂದ ತಂಡವು 40.2 ಓವರ್‌ಗಳಲ್ಲಿ 167 ರನ್‌ ಗಳಿಸಿ ಆಲೌಟ್ ಆಯಿತು.

ADVERTISEMENT

ಗುರಿ ಬೆನ್ನಟ್ಟಿದ ಭಾರತ ತಂಡವು 31.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 170 ರನ್‌ ಗಳಿಸಿತು. ಪೃಥ್ವಿ ಶಾ (17; 24ಎ) ಹಾಗೂ ಋತುರಾಜ್ (41; 54ಎ) ಮೊದಲ ವಿಕೆಟ್‌ಗೆ 35 ರನ್ ಸೇರಿಸಿದರು. ಪೃಥ್ವಿ ಔಟಾದ ಮೇಲೆ ಋತುರಾಜ್ ಹಾಗೂ ರಾಹುಲ್ ತ್ರಿಪಾಠಿ (31; 40ಎ) 56 ರನ್‌ ಸೇರಿಸಿದರು.

ಇವರಿಬರಬರ ಜೊತೆಯಾಟವನ್ನು ಮುರಿಯುವಲ್ಲಿ ರಿಪೊನ್ ಯಶಸ್ವಿಯಾದರು. ಋತುರಾಜ್ ವಿಕೆಟ್ ಪಡೆದ ಅವರು ಸಂಭ್ರಮಿಸಿದರು.

ಆದರೆ ನಾಯಕ ಸಂಜು (ಔಟಾಗದೆ 29, 32ಎ, 4X1, 6X3) ಹಾಗೂ ರಜತ್ (ಔಟಾಗದೆ 45; 41ಎ, 4X7) ತಂಡವನ್ನು ಗೆಲುವಿನ ದಡ ಸೇರಿಸಿದರು. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಟೆಸ್ಟ್‌’ಗಳಲ್ಲಿಯೂ ರಜತ್ ಉತ್ತಮವಾಗಿ ಆಡಿದ್ದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ ಎ: 40.2 ಓವರ್‌ಗಳಲ್ಲಿ 167 (ರಾಬರ್ಟ್ ಒ ಡೊನೆಲ್ 22, ರಿಪೊನ್ 61, ಜೋ ವಾಕರ್ 36, ಶಾರ್ದೂಲ್ ಠಾಕೂರ್ 32ಕ್ಕೆ4, ಕುಲದೀಪ್ ಸೇನ್ 30ಕ್ಕೆ3) ಭಾರತ ಎ: 31.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 170 (ಋತುರಾಜ್ ಗಾಯಕವಾಡ 41, ರಾಹುಲ್ ತ್ರಿಪಾಠಿ 31, ಸಂಜು ಸ್ಯಾಮ್ಸನ್ ಔಟಾಗದೆ 29, ರಜತ್ ಪಾಟೀದಾರ ಔಟಾಗದೆ 45, ಲೊಗಾನ್ ವ್ಯಾನ್ ಬೀಕ್ 38ಕ್ಕೆ1) ಫಲಿತಾಂಶ: ಭಾರತ ಎ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.