ಮೈಸೂರು: ಕೆ.ಪಿ. ಕಾರ್ತಿಕೇಯ ಶತಕದ ಬಲದಿಂದ ( 115; 152 ಎ, 4X15, 6X1) ಕೆಎಸ್‌ಸಿಎ ಕೋಲ್ಟ್ಸ್ ತಂಡವು ಕ್ಯಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 373 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಸೋತು ಇನಿಂಗ್ಸ್ ಆರಂಭಿಸಿದ ಕೋಲ್ಟ್ಸ್‌ಗೆ ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕೇಯ ಉತ್ತಮ ಬ್ಯಾಟಿಂಗ್ ಮೂಲಕ ಬಲ ತುಂಬಿದರು. 5ನೇ ವಿಕೆಟ್‌ಗೆ ಸಂಜಯ್ ಅಶ್ವಿನ್ ( 80) ಜೊತೆಗೂಡಿ 149 ರನ್ ಕಲೆ ಹಾಕುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಒಯ್ದರು. ಅರ್ಧ ಶತಕ ಸಿಡಿಸಿದ ಅಶ್ವಿನ್ ಅಜೇಯರಾಗಿ ಉಳಿಸಿದ್ದು, ಬುಧವಾರಕ್ಕೆ ಆಟ ಕಾಯ್ದು
ಕೊಂಡರು. ನಾಯಕ ಅನೀಶ್ವರ್ ಗೌತಮ್ (47) ಉಪಯುಕ್ತ ಕಾಣಿಕೆ ನೀಡಿದರು.
ಶತಕಗಳ ಸೊಬಗು: ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಆರಂಭಗೊಂಡ ಬರೋಡ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಂಕುಶ್ ಬೈನ್ಸ್ (109) ಹಾಗೂ ಕೆ. ಅಂಕಿತ್ (106) ಶತಕ ಸಿಡಿಸುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಒಯ್ದರು.
ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ: ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 89 ಓವರ್‌ಗಳಲ್ಲಿ 6ಕ್ಕೆ 373 (ಕೆ.ಪಿ. ಕಾರ್ತಿಕೇಯ 115, ಸಂಜಯ್ ಅಶ್ವಿನ್ ಔಟಾಗದೇ 80, ಅನೀಶ್ವರ್ ಗೌತಮ್ 47. ಮಹೀಪ್ ಕುಮಾರ್ 41ಕ್ಕೆ 2, ಕೆಎಸ್‌ಎನ್ ರಾಜು 64ಕ್ಕೆ 2)
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ, ಮೈಸೂರು: ಮೊದಲ ಇನಿಂಗ್ಸ್: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 90 ಓವರ್‌ಗಳಲ್ಲಿ 3 ವಿಕೆಟ್‌ಗೆ 265 ಅಂಕುಶ್ ಬೈನ್ಸ್ 109, ಕೆ. ಅಂಕಿತ್ 106. ಭಾರ್ಗವ್ ಭಟ್ 60ಕ್ಕೆ 2)
ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 64.1 ಓವರ್‌ಗಳಲ್ಲಿ 162 (ರಿಷಭ್ ಚೌಹಾನ್ 48; ವಿದ್ವತ್ ಕಾವೇರಪ್ಪ 21ಕ್ಕೆ 3, ಅಭಿಲಾಷ್ ಶೆಟ್ಟಿ 18ಕ್ಕೆ 5). ಕೆಎಸ್‌ಸಿಎ ಇಲೆವೆನ್: 14.4 ಓವರ್‌ಗಳಲ್ಲಿ 2 ವಿಕೆಟ್‌ಗೆ 38 (ಆರ್ಯನ್ ಪಾಂಡೆ 15ಕ್ಕೆ ).
ಬಿಜಿಎಸ್ ಕ್ರೀಡಾಂಗಣ: ವಿದರ್ಭ ಕ್ರಿಕೆಟ್ ಸಂಸ್ಥೆ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 320 (ಅಥರ್ವ ತೈಡೆ 170, ಅಮನ್ ಮೊಖಡೆ 60, ಶಿವಂ ದೇಶಮುಖ್ ಔಟಾಗದೇ 58; ಆದಿತ್ಯ ನಾಯರ್ 47ಕ್ಕೆ 2). ವಿರುದ್ಧ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್.
ಆಲೂರು 2 ಕ್ರೀಡಾಂಗಣ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ: 41 ಓವರ್‌ಗಳಲ್ಲಿ 136 (ಮೆಹುಲ್ ಪಟೇಲ್ 54; ಅರ್ಜುನ್ ತೆಂಡೂಲ್ಕರ್ 36ಕ್ಕೆ 5, ಲಕ್ಷ್ಮೇಶ್ ಪವಾನೆ 35ಕ್ಕೆ 2). ಗೋವಾ ಕ್ರಿಕೆಟ್ ಸಂಸ್ಥೆ: 46 ಓವರ್‌ಗಳಲ್ಲಿ 5 ವಿಕೆಟ್‌ಗೆ 158 (ಅಭಿನವ್ ತೇಜ್ರಾನಾ 77; ನಿಕಿತ್ ಧುಮಾಲ್ 22ಕ್ಕೆ 2, ಅಕ್ಷಯ್ ವೈಕರ್ 69ಕ್ಕೆ 2).
ಆಲೂರು 3 ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 284 (ಲೋಚನ್ ಎಸ್. ಗೌಡ 59, ಕೃತಿಕ್ ಕೃಷ್ಣ ಔಟಾಗದೇ 73; ಮುಖ್ತರ್ ಹುಸೇನ್ 52ಕ್ಕೆ 2, ರಿಯಾನ್ ಪರಾಗ್ 88ಕ್ಕೆ 3) ವಿರುದ್ಧ ಅಸ್ಸಾಂ ಕ್ರಿಕೆಟ್ ಸಂಸ್ಥೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.