ADVERTISEMENT

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯ: ಶಫೀಕ್‌ ಶತಕ, ಪಾಕ್‌ ಹೋರಾಟ

ಏಜೆನ್ಸೀಸ್
Published 19 ಜುಲೈ 2022, 14:47 IST
Last Updated 19 ಜುಲೈ 2022, 14:47 IST
ಶತಕ ಗಳಿಸಿಚ ಅಬ್ದುಲ್ಲಾ ಶಫೀಕ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಶತಕ ಗಳಿಸಿಚ ಅಬ್ದುಲ್ಲಾ ಶಫೀಕ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಗಾಲ್‌: ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್‌ (ಬ್ಯಾಟಿಂಗ್‌ 112, 289 ಎ) ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ, ಶ್ರೀಲಂಕಾ ಎದುರಿನ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಗೆಲುವಿನತ್ತ ಹೆಜ್ಜೆಯಿಟ್ಟಿದೆ.

ಗಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 342 ರನ್‌ ಗುರಿ ಪಡೆದಿರುವ ಪಾಕಿಸ್ತಾನ, ನಾಲ್ಕನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ 85 ಓವರ್‌ಗಳಲ್ಲಿ 3 ವಿಕೆಟ್‌ಗೆ 222 ರನ್‌ ಗಳಿಸಿದೆ.

ಪಾಕ್‌ ತಂಡ ಗೆಲುವಿಗೆ ಇನ್ನೂ 120 ರನ್‌ ಗಳಿಸಬೇಕಿದ್ದು, ಕೊನೆಯ ದಿನದಾಟ ಕುತೂಹಲ ಮೂಡಿಸಿದೆ. ಶಫೀಕ್‌ ಜತೆ ಮಹಮ್ಮದ್ ರಿಜ್ವಾನ್‌ ಕ್ರೀಸ್‌ನಲ್ಲಿದ್ದರು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ಪಾಕ್‌ ತಂಡಕ್ಕೆ ಶಫೀಕ್‌ ಮತ್ತು ಇಮಾಮ್‌ ಉಲ್‌ ಹಕ್‌ (35) ಮೊದಲ ವಿಕೆಟ್‌ಗೆ 35 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಇಮಾಮ್‌ ಮತ್ತು ಅಜರ್‌ ಅಲಿ (6) ಅಲ್ಪ ಅಂತರದಲ್ಲಿ ಔಟಾದರು. ಆದರೆ ನಾಯಕ ಬಾಬರ್‌ ಅಜಮ್ (55, 104 ಎ) ಮತ್ತು ಶಫೀಕ್‌ ಮೂರನೇ ವಿಕೆಟ್‌ಗೆ 101 ರನ್‌ ಸೇರಿಸಿ ತಂಡದ ಗೆಲುವಿನ ಕನಸು ಜೀವಂತವಾಗಿರಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌ ಶ್ರೀಲಂಕಾ 222, ಪಾಕಿಸ್ತಾನ 218. ಎರಡನೇ ಇನಿಂಗ್ಸ್‌ ಶ್ರೀಲಂಕಾ 337, ಪಾಕಿಸ್ತಾನ 3ಕ್ಕೆ 222 (85 ಓವರ್) ಅಬ್ದುಲ್ಲಾ ಶಫೀಕ್‌ ಬ್ಯಾಟಿಂಗ್ 112, ಇಮಾಮ್‌ ಉಲ್‌ ಹಕ್ 35, ಬಾಬರ್‌ ಅಜಮ್ 55, ಮಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್ 7, ಪ್ರಭಾತ್‌ ಜಯಸೂರ್ಯ 89ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.