ADVERTISEMENT

ಕೊಹ್ಲಿಯನ್ನು ಮೆಚ್ಚಿದ ಪಾಕ್ ಮಾಜಿ ನಾಯಕ ಅಫ್ರಿದಿ; ಕಾರಣ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 10:51 IST
Last Updated 6 ಅಕ್ಟೋಬರ್ 2021, 10:51 IST
ಶಾಹೀದ್ ಆಫ್ರಿದಿ ಹಾಗೂ ವಿರಾಟ್ ಕೊಹ್ಲಿ
ಶಾಹೀದ್ ಆಫ್ರಿದಿ ಹಾಗೂ ವಿರಾಟ್ ಕೊಹ್ಲಿ   

ದುಬೈ: ಅಭ್ಯಾಸದ ಅವಧಿಯಲ್ಲೂ ಶೇಕಡಾ 100ರಷ್ಟು ಅರ್ಪಣೆಯಿಂದ ತರಬೇತಿ ನಡೆಸುತ್ತಿರುವ ವಿರಾಟ್ ಕೊಹ್ಲಿ ಮನೋಭಾವವನ್ನು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಶ್ಲಾಘಿಸಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ, ಅಭ್ಯಾಸದ ಅವಧಿಯ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿದ್ದಾರೆ.

ಇದನ್ನು ಗಮನಿಸಿರುವ ಅಫ್ರಿದಿ,' ವಿರಾಟ್ ಆಟ ನೋಡುವುದೇ ಸೊಗಸು, ಶ್ರೇಷ್ಠ ಆಟಗಾರ ಯಾವಾಗಲೂ ಅಭ್ಯಾಸದಲ್ಲಿ ಶೇಕಡಾ 100ರಷ್ಟು ಪರಿಶ್ರಮ ವಹಿಸುತ್ತಾರೆ' ಎಂದು ಕೈಚಪ್ಪಾಳೆ ತಟ್ಟುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಶಾಹಿದ್ ಅಫ್ರಿದಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದಾಗ ವಿರಾಟ್ ಕೊಹ್ಲಿ ಸಹಿ ಮಾಡಿರುವ ಜೆರ್ಸಿ ಉಡುಗೊರೆಯಾಗಿ ನೀಡಿದ್ದರು. ಬಳಿಕ ಅಫ್ರಿದಿ ಸಹಾಯಾರ್ಥ ಸಂಸ್ಥೆಗೆ ಬ್ಯಾಟ್ ದಾನ ಮಾಡುವ ಮೂಲಕ ಗಮನ ಸೆಳೆದಿದ್ದರು.

ಅಂದ ಹಾಗೆ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಿಗದಿಯಾಗಿದೆ. ಇದರಿಂದ ವಿರಾಟ್ ಕೊಹ್ಲಿ ಹಾಗೂ ಪಾಕ್ ನಾಯಕ ಬಾಬರ್ ಆಜಂ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.