ADVERTISEMENT

ಯಶ್ ಬಳಗಕ್ಕೆ ಐರ್ಲೆಂಡ್ ಸವಾಲು

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಉತ್ತಮ ಲಯದಲ್ಲಿ ವಿಕ್ಕಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:13 IST
Last Updated 18 ಜನವರಿ 2022, 17:13 IST
ಯಶ್ ಧುಳ್
ಯಶ್ ಧುಳ್   

ತರೌಬಾ, ವೆಸ್ಟ್ ಇಂಡೀಸ್: ಮೊದಲ ಪಂದ್ಯದ ಜಯದೊಂದಿಗೆ ಭರ್ತಿ ಆತ್ಮವಿಶ್ವಾಸದಲ್ಲಿರುವ ಯಶ್ ಧುಳ್ ನಾಯಕತ್ವದ ತಂಡವು ಬುಧವಾರ 19 ವರ್ಷದೊಳಗಿವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಐರ್ಲೆಂಡ್ ಎದುರು ಕಣಕ್ಕಿಳಿಯಲಿದೆ.

ಬ್ರಯನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಯಶ್ ಧುಳ್ ತಂಡವು ಬ್ಯಾಟಿಂಗ್‌ನಲ್ಲಿ ಸುಧಾರಣೆಯತ್ತ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಜಯದಲ್ಲಿ ಯಶ್ ಮಿಂಚಿದ್ದರು. ಆದರೆ, ಆರಂಭಿಕ ಜೋಡಿಯು ವೈಫಲ್ಯ ಅನುಭವಿಸಿತ್ತು. ಆದರೆ ಪ್ರತಿಭಾವಂತ ಬ್ಯಾಟರ್‌ ಹರ್ನೂರ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ಸಫಲರಾದರೆ ತಂಡಕ್ಕೆ ಹೆಚ್ಚಿನ ಬಲ ಲಭಿಸುತ್ತದೆ.

ಎಡಗೈ ಸ್ಪಿನ್ನರ್ ವಿಕ್ಕಿ ಓಸ್ವಾಲ್ ಆ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದರು. ಅವರೊಂದಿಗೆ ಮಧ್ಯಮವೇಗಿ ರಾಜ್ ಭಾವಾ ಕೂಡ ಮಿಂಚಿದ್ದರು. ಆಲ್‌ರೌಂಡರ್ ರಾಜವರ್ಧನ್ ಹಂಗರಗೇಕರ್, ಕನ್ನಡಿಗ ಅನೀಶ್ವರ್ ಗೌತಮ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡದ ಜಯದ ಹಾದಿ ಸುಗಮವಾಗುವುದರಲ್ಲಿ ಸಂಶಯವಿಲ್ಲ.

ADVERTISEMENT

ಐರ್ಲೆಂಡ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಉಗಾಂಡಾ ಎದುರು 39 ರನ್‌ಗಳಿಂದ ಜಯಿಸಿದೆ. ತಂಡದ ನಾಯಕ ಟಿಮ್ ಟೆಕ್ಟರ್ ತಮ್ಮ ಆಲ್‌ರೌಂಡ್ ಆಟದ ಮೂಲಕ ಎದುರಾಳಿಗಳಿಗೆ ಸವಾಲೊಡ್ಡಬಲ್ಲರು.

ಪಂದ್ಯ ಆರಂಭ: ಸಂಜೆ 6.30

ಎರಡನೇ ಪಂದ್ಯ

ಆಸ್ಟ್ರೇಲಿಯಾ–ಸ್ಕಾಟ್ಲೆಂಡ್ (ಡಿ ಗುಂಪು)

ಸ್ಥಳ: ಕಾನರಿ ಸ್ಪೋರ್ಟ್ಸ್‌ ಕ್ಲಬ್. ಸೇಂಟ್ ಕಿಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.