ನವದೆಹಲಿ: ಭಾರತೀಯ ಪ್ರೀಮಿಯರ್ ಲೀಗ್‌ನ (IPL) ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಅಭಿನಯಿಸಿರುವ ಉಬರ್‌ನ ಜಾಹೀರಾತೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನ್ಯಾಯಾಲಯದ ಮೊರೆಹೋಗುವಂತೆ ಮಾಡಿದೆ.
ಟ್ರಾವಿಸ್ ಹೆಡ್ ಕಳ್ಳಹೆಜ್ಜೆಯೊಂದಿಗೆ ಕ್ರೀಡಾಂಗಣದೊಳಗೆ ಕಾಲಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಬಾದ್ ತಂಡದ ನಡುವಿನ ಪಂದ್ಯದ ಫಲಕದಲ್ಲಿ ಸ್ಪ್ರೇ ಪೇಯಿಂಟ್ ಬಳಸಿ ‘ರಾಯಲಿ ಚಾಲೆಂಜ್ಡ್ ಬೆಂಗಳೂರು’ ಎಂದು ಬದಲಿಸುತ್ತಾರೆ.
ಆ ಹೊತ್ತಿಗೆ ಭದ್ರತಾ ಸಿಬ್ಬಂದಿ ಇವರನ್ನು ಬೆನ್ನಟ್ಟುತ್ತಾರೆ. ಉಬರ್‌ನ ಮೂರು ನಿಮಿಷಗಳಲ್ಲಿ ವಾಹನ ಸೌಲಭ್ಯವನ್ನು ಪಡೆದು ಬೈಕ್‌ನಲ್ಲಿ ಹೆಡ್ ಪರಾರಿಯಾಗುತ್ತಾರೆ. ಮೂರು ನಿಮಿಷಗಳಲ್ಲಿ ತನ್ನ ಸೇವೆ ಲಭ್ಯ ಎಂಬ ಜಾಹೀರಾತು ಸಿದ್ಧಪಡಿಸಿದ್ದರಲ್ಲಿ ತನ್ನ ತಂಡದ ಹೆಸರನ್ನು ಅವಹೇಳನ ಮಾಡಲಾಗಿದೆ ಎಂದು ಉಬರ್ ವಿರುದ್ಧ ಆರ್‌ಸಿಬಿ ನ್ಯಾಯಾಲಯದ ಮೆಟ್ಟಿಲೇರಿದೆ.
ಮಧ್ಯಂತರ ಇಂಜಂಕ್ಷನ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.