
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಸ್ಪಿನ್ನರ್ ದೀಕ್ಷಾ ಹೊನುಶ್ರೀ (33ಕ್ಕೆ 4) ಅವರ ಕೈಚಳಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ 43 ರನ್‌ಗಳಿಂದ ಛತ್ತೀಸಗಢ ತಂಡವನ್ನು ಮಣಿಸಿತು.
ಹೈದರಾಬಾದ್‌ನ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎಲೀಟ್ ಗುಂಪಿನ ಪಂದ್ಯದಲ್ಲಿ ರಚಿತಾ ಹತ್ವಾರ್ ನೇತೃತ್ವದ ರಾಜ್ಯ ತಂಡ ಗೆಲುವಿನ ಓಟ ಮುಂದುವರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಕಾಶ್ವಿ ಕಂಡಿಕುಪ್ಪ (64;77ಎ) ಅವರ ಅರ್ಧಶತಕದ ನೆರವಿನಿಂದ 48.4 ಓವರ್‌ಗಳಲ್ಲಿ 180 ರನ್ ಗಳಿಸಿ ಅಲೌಟ್ ಆಯಿತು. ಛತ್ತೀಸಗಢ ತಂಡದ ಮಹೆಕ್ ನರ್ವಾಸೆ, ಶ್ರೇಯಾ ಶ್ರೀನಿವಾಸ್ ಮತ್ತು ದೀಪ್ತಿಕಾ ಭಗತ್ ತಲಾ ಮೂರು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಛತ್ತೀಸಗಢ ತಂಡವನ್ನು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 48.4 ಓವರ್‌ಗಳಲ್ಲಿ 180 (ಕಾಶ್ವಿ ಕಂಡಿಕುಪ್ಪ 64; ಮಹೆಕ್ ನರ್ವಾಸೆ 38ಕ್ಕೆ 2, ಶ್ರೇಯಾ ಶ್ರೀನಿವಾಸ್ 39ಕ್ಕೆ 2, ದೀಪ್ತಿಕಾ ಭಗತ್ 35ಕ್ಕೆ 2). ಛತ್ತೀಸಗಢ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 137 (ಯತಿ ಶರ್ಮಾ 34, ಭವಿಕಾ ಸಾಹು 36; ದೀಕ್ಷಾ ಹೊನುಶ್ರೀ 33ಕ್ಕೆ 4). ಫಲಿತಾಂಶ: ಕರ್ನಾಟಕಕ್ಕೆ 43 ರನ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.