ಭಾರತ ಯುವ ಪಡೆ
ಕೃಪೆ: ಐಸಿಸಿ
ಹರಾರೆ: 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಅನ್ನು ಭಾರತ ಯುವಪಡೆ 100 ರನ್‌ಗಳಿಂದ ಗೆಲ್ಲುವ ಮೂಲಕ 6ನೇ ಭಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಅವರು, 80 ಎಸೆತಗಳಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್ ಸಹಿತ 175 ರನ್ ಕಲೆಹಾಕಿದರು.
ವೈಭವ್ ಸೂರ್ಯವಂಶಿ ಜೊತೆ ನಾಯಕ ಆಯುಷ್ ಮ್ಹಾತ್ರೆ (53), ವೇದಾಂತ್ ತ್ರಿವೇದಿ (30) ಹಾಗೂ ಅಭಿಗ್ಯಾನ್ ಕುಂದು (40) ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
411 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್ ಬೆನ್ ಡಾವ್ಕಿನ್ಸ್ (66) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕಾಲೆಬ್ ಫಾಲ್ಕನರ್ (115 ರನ್) ಗಳಿಸುವ ಮೂಲಕ ಹೋರಾಟ ನಡೆಸಿದರಾದರೂ, ಭಾರತ ನೀಡಿದ್ದ ಬೃಹತ್ ಗುರಿ ತಲುಪಲು ವಿಫಲವಾಗಿ, 100 ರನ್‌ಗಳ ಸೋಲು ಅನುಭವಿಸಿದರು.
ಭಾರತದ ಪರ ಆರ್.ಎಸ್ ಅಂಬ್ರಿಶ್ 3 ವಿಕೆಟ್. ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾನ್ ತಲಾ 2ವಿಕೆಟ್, ಖಿಲಾನ್ ಪಟೇಲ್ ಹಾಗೂ ಆಯುಷ್ ಮ್ಹಾತ್ರೆ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.