ADVERTISEMENT

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್‌ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ

ಪಿಟಿಐ
Published 17 ಆಗಸ್ಟ್ 2025, 15:44 IST
Last Updated 17 ಆಗಸ್ಟ್ 2025, 15:44 IST
ಡಾ.ವೇಸ್‌ ಪೇಸ್‌
ಡಾ.ವೇಸ್‌ ಪೇಸ್‌   

ಕೋಲ್ಕತ್ತ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ, 1972ರ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಭಾರತ ಹಾಕಿ ತಂಡದ ಆಟಗಾರ ಡಾ.ವೇಸ್ ಪೇಸ್ ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ವೇಸ್ ಅವರು ಗುರುವಾರ ನಿಧನರಾಗಿದ್ದರು.

ಇಲ್ಲಿನ ಎಜೆಸಿ ಬೋಸ್‌ ರಸ್ತೆಯಲ್ಲಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ಹಾಕಿ ಬಂಗಾಳ ಪದಾಧಿಕಾರಿಗಳು ಸೇರಿ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅರುಣ್‌ ಲಾಲ್‌, ಟಿಎಂಸಿ ನಾಯಕ ಡೆರೆಕ್‌ ಒಬ್ರಯಾನ್ ಅವರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪೇಸ್‌ ಅವರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಸ್ಮಶಾನಕ್ಕೆ ಕರೆದೊಯ್ಯುವಾಗ ಜೂನಿಯರ್‌ ಆಟಗಾರರು ಹಾಕಿ ಮತ್ತು ಟೆನಿಸ್‌ ಬ್ಯಾಟ್‌ಗಳನ್ನು ಹಿಡಿದು, ಗೌರವ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.