
ನಾಗ್ಪುರ: ರಣಜಿ ಟ್ರೋಫಿ ವಿಜೇತ ವಿದರ್ಭ ತಂಡವು ಇರಾನಿ ಕಪ್ ಅನ್ನೂ ಜಯಿಸುವ ತವಕದಲ್ಲಿದೆ. ಗೆಲುವಿಗೆ 361 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ರೆಸ್ಟ್ ಆಫ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.
ನಾಲ್ಕನೇ ದಿನವಾದ ಶನಿವಾರ 2 ವಿಕೆಟ್‌ಗೆ 96 ರನ್‌ಗಳೊಡನೆ ಆಟ ಮುಂದುವರಿಸಿದ ಆತಿಥೇಯ ತಂಡವು 94.1 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಆದರೂ, ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿದ್ದ 128 ರನ್ ಮುನ್ನಡೆಯಿಂದಾಗಿ ಒತ್ತಡ ಹೇರವಷ್ಟು ಗುರಿ ನಿಗದಿಪಡಿಸಿತು.
ಪ್ರಶಸ್ತಿ ಗೆಲ್ಲಲು ರಜತ್ ಪಾಟೀದಾರ್ ಪಡೆಗೆ ಇನ್ನೂ 331 ರನ್ ಗಳಿಸಬೇಕಿದೆ. ಅಂತಿಮ ದಿನವಾದ ಭಾನುವಾರ ಎದುರಾಳಿ ತಂಡದ 8 ವಿಕೆಟ್‌ಗಳನ್ನು ಬೇಗ ಪಡೆದು ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ವಿದರ್ಭ ಬೌಲರ್‌ಗಳ ಮುಂದಿದೆ.
ರೆಸ್ಟ್ ಆಫ್ ಇಂಡಿಯಾ ತಂಡವು ಆರಂಭಿಕ ಬ್ಯಾಟರ್‌ಗಳಾದ ಅಭಿಮನ್ಯು ಈಶ್ವರನ್ (17; 18ಎ) ಹಾಗೂ ಆರ್ಯನ್ ಜೂಯೆಲ್ (6; 14ಎ) ಅವರ ವಿಕೆಟ್ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ವಿದರ್ಭ: 101.4 ಓವರ್‌ಗಳಲ್ಲಿ 342. ರೆಸ್ಟ್ ಆಫ್ ಇಂಡಿಯಾ: 69.5 ಓವರ್‌ಗಳಲ್ಲಿ 214. ಎರಡನೇ ಇನಿಂಗ್ಸ್: ವಿದರ್ಭ: 94.1 ಓವರ್‌ಗಳಲ್ಲಿ 232 (ಅಮನ್ ಮೋಖಡೆ 37, ಅಕ್ಷಯ್ ವಾಡ್ಕರ್ 36, ದರ್ಶನ್ ನಲ್ಕಂಡೆ 35; ಅನ್ಷುಲ್ ಕಂಬೋಜ್ 34ಕ್ಕೆ4, ಗುರುಪ್ರೀತ್ ಬ್ರಾರ್ 41ಕ್ಕೆ2, ಸಾರಾಂಶ್ ಜೈನ್ 52ಕ್ಕೆ2, ಮಾನವ್ ಸುತಾರ್ 82ಕ್ಕೆ2); ರೆಸ್ಟ್ ಆಫ್ ಇಂಡಿಯಾ: 12 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 30 (ಅಭಿಮನ್ಯು ಈಶ್ವರನ್ 14, ಇಶಾನ್ ಕಿಶನ್ ಔಟಾಗದೇ 5, ರಜತ್ ಪಾಟೀದಾರ್ ಔಟಾಗದೇ 2, ಆದಿತ್ಯ ಠಾಕ್ರೆ 8ಕ್ಕೆ1, ಹರ್ಷ್ ದುಬೆ 20ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.