ADVERTISEMENT

Video: ಪಾಕ್ ಪಂದ್ಯದ ಬಳಿಕ ತಿಲಕ್ ವರ್ಮಾ ಕನ್ನಡಿಗ ದಿವಗಿ ಕಾಲಿಗೆ ಬಿದ್ದಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 8:12 IST
Last Updated 23 ಸೆಪ್ಟೆಂಬರ್ 2025, 8:12 IST
<div class="paragraphs"><p>ರಾಘವೇಂದ್ರ ದಿವಗಿ–ತಿಲಕ್ ವರ್ಮಾ</p></div>

ರಾಘವೇಂದ್ರ ದಿವಗಿ–ತಿಲಕ್ ವರ್ಮಾ

   

ದುಬೈ: ಏಷ್ಯಾ ಕಪ್‌ನ ಬಲಿಷ್ಠ ತಂಡವಾಗಿ ಟೀಂ ಇಂಡಿಯಾ ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಓಟವನ್ನು ಮುಂದುವರೆಸಿದೆ. ಈ ನಡುವೆ ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾದ ವಿಡಿಯೋ ಒಂದನ್ನು ಹಂಚಿಕೊಂಡಿದೆ.

ಈ ವಿಡಿಯೋದ ಆರಂಭದಲ್ಲಿ ಟೀಂ ಇಂಡಿಯಾದ ಆಟಗಾರರು ಮೈದಾನಕ್ಕೆ ಬರುವುದರಿಂದ ಹಿಡಿದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟಾಸ್ ಹಾಗೂ ಪಂದ್ಯದಲ್ಲಿ ಆಡಿರುವ ಕೆಲವೊಂದಷ್ಟು ತುಣುಕುಗಳ ಜೊತೆಗೆ ಜಯದ ಸಂಭ್ರಮದ ವಿಡಿಯೋಗಳನ್ನು ಕೂಡ ಸೇರಿಸಿದೆ.

ADVERTISEMENT

ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ತಂಡದ ಕೋಚ್ ಗೌತಮ್ ಗಂಭೀರ್ ತಂಡದ ಸಹಾಯಕ ಸಿಬ್ಬಂದಿಯಾಗಿರುವ ಕನ್ನಡಿಗ ರಾಘವೇಂದ್ರ ದಿವಗಿ ಅವರಿಗೆ ‘ಇಂಪ್ಯಾಕ್ಟ್ ಪ್ಲೇಯರ್ ಆಫ್‌ ದಿ ಮ್ಯಾಚ್‘ ಪ್ರಶಸ್ತಿ ಘೋಷಿಸುವಂತೆ ಹೇಳುತ್ತಾರೆ. ಆಗ ದಿವಗಿ ಅವರು ತಿಲಕ್ ವರ್ಮಾ ಅವರ ಹೆಸರು ತೆಗೆದುಕೊಳ್ಳುತ್ತಾರೆ. ಈ ವೇಳೆ ಪದಕಕ್ಕೆ ಕೊರಳೊಡ್ಡುವ ಮುನ್ನ ತಿಲಕ್ ಅವರು ದಿವಗಿ ಕಾಲಿಕೆ ನಮಸ್ಕರಿಸಲು ಮುಂದಾಗಿದ್ದು ಭಾವನಾತ್ಮಕ ಕ್ಷಣವಾಗಿತ್ತು.

ಪಾಕಿಸ್ತಾನದ ವಿರುದ್ಧ ಸ್ಫೋಟಕ 30 ರನ್ ಸಿಡಿಸಿದ ತಿಲಕ್ ವರ್ಮಾ ಅವರನ್ನು ಗುರುತಿಸಿ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿ ನೀಡಿರುವುದಕ್ಕೆ ತಿಲಕ್ ಕೂಡ ದಿವಗಿ ಅವರಿಗೆ ಹಗೂ ತಂಡದ ಸಹ ಆಟಗಾರರಿಗೆ ಧನ್ಯವಾದ ತಿಳಿಸಿದರು.

ಯಾರು ಈ ರಾಘವೇಂದ್ರ ದಿವಗಿ?

ಮೂಲತಃ ರಾಘವೇಂದ್ರ ದಿವಗಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಇವರ ತಂದೆ ಶಿಕ್ಷಕಾರಗಿದ್ದರು. ಕ್ರಿಕೆಟಿಗರಾಗಬೇಕು ಎಂಬ ಕನಸು ಹೊತ್ತಿದ್ದ ದಿವಗಿ ಮನೆಬಿಟ್ಟು ಬೆಂಗಳೂರಿಗೆ ಬರುತ್ತಾರೆ.

ಥ್ರೋ ಡೌನ್ ಸ್ಪೆಷಲಿಸ್ಟ್

ರಾಘವೇಂದ್ರ ದಿವಗಿ ಭಾರತೀಯ ಕ್ರಿಕೆಟ್ ತಂಡದ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಟರ್‌ಗಳಿಗೆ ಅಭ್ಯಾಸ ನೀಡುವ ಮೂಲಕ ಬ್ಯಾಟರ್‌ಗಳ ಕೌಶಲ್ಯ ಹೆಚ್ಚಿಸುವುದು ದಿವಗಿ ಅವರ ಕೆಲಸವಾಗಿದೆ.

ನಿರಂತರವಾಗಿ ಗಂಟೆಗೆ 155ರಿಂದ 160 ಕಿ.ಮೀ ವೇಗ

2011 ರಿಂದಲೂ ಭಾರತೀಯ ತಂಡದ ಜೊತೆ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು. ನೆಟ್ ಪ್ರ್ಯಾಕ್ಟೀಸ್ ವೇಳೆ ಬ್ಯಾಟರ್ ಗಳಿಗೆ ವೇಗವಾಗಿ ಚೆಂಡನ್ನು ಎಸೆಯುವುದು ಇವರ ಕಾರ್ಯವಾಗಿದೆ. ಸಾಮಾನ್ಯವಾಗಿ ಬೇರೆ ತಂಡದ ಬಳಿ ಇರುವ ಥ್ರೋ ಡೌನ್ ಸ್ಪೆಷಲಿಸ್ಟ್ ಗಳು ಗಂಟೆಗೆ 145ರಿಂದ 150 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯಬಲ್ಲರು. ಆದರೆ ಕನ್ನಡಿಗ ದಿವಗಿ ನಿರಂತರವಾಗಿ ಗಂಟೆಗೆ 155ರಿಂದ 160 ಕಿ.ಮೀ ವೇಗದಲ್ಲಿ ಚೆಂಡೆಸೆಯಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.