ADVERTISEMENT

ವಿಜಯ್ ಹಜಾರೆ ಟ್ರೋಫಿ: ಇಶಾಂತ್ ಶರ್ಮಾಗೆ ಐದು ವಿಕೆಟ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:32 IST
Last Updated 6 ಜನವರಿ 2026, 16:32 IST
<div class="paragraphs"><p>ಇಶಾಂತ್ ಶರ್ಮಾ (ಸಂಗ್ರಹ ಚಿತ್ರ)</p></div>

ಇಶಾಂತ್ ಶರ್ಮಾ (ಸಂಗ್ರಹ ಚಿತ್ರ)

   

ಬೆಂಗಳೂರು: ಐದು ವಿಕೆಟ್ ಗೊಂಚಲು ಗಳಿಸಿದ ಅನುಭವಿ ವೇಗಿ ಇಶಾಂತ್ ಶರ್ಮಾ ಅಮೋಘ ಬೌಲಿಂಗ್ ಬಲದಿಂದ ದೆಹಲಿ ತಂಡವು ಡಿ ಗುಂಪಿನ ಪಂದ್ಯದಲ್ಲಿ ರೈಲ್ವೆಸ್ ವಿರುದ್ಧ ಗೆದ್ದಿತು.

ಬೆಂಗಳೂರು ಹೊರವಲಯದ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವು 6 ವಿಕೆಟ್‌ಗಳಿಂದ ಜಯಿಸಿತು.

ADVERTISEMENT

18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಿತು. ಆದರೆ ಇನ್ನೂ ಎಂಟರ ಘಟ್ಟದ ಸ್ಥಾನ ಖಚಿತವಾಗಿಲ್ಲ. ಹರಿಯಾಣ 18 ಹಾಗೂ ಸೌರಾಷ್ಟ್ರ ತಂಡಗಳು 16 ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಉಳಿದಿರುವ ಇನ್ನೊಂದು ಸುತ್ತಿನಲ್ಲಿ ದೆಹಲಿ ತಂಡವು ಹರಿಯಾಣ ಎದುರು ಆಡಬೇಕಿದೆ.

ಸೌರಾಷ್ಟ್ರವು ಗುಜರಾತ್ ಎದುರು ಆಡಲಿದೆ.

ದೆಹಲಿ ತಂಡವು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡಿತು. ಟಾಸ್ ಗೆದ್ದ ರೈಲ್ವೆಸ್ ಮೊದಲು ಬ್ಯಾಟಿಂಗ್ ಮಾಡಿತು. ಭಾರತ ತಂಡದ ವೇಗಿಯಾಗಿದ್ದ ಇಶಾಂತ್ (4–2–5–1) ಅವರ ಚುರುಕಾದ ದಾಳಿಗೆ ಕೇವಲ 179 ರನ್‌ಗಳಿಗೆ ಕುಸಿಯಿತು. ಕುಶ್ ಮರಾಠೆ (51; 66ಎ) ಅರ್ಧಶತಕ ಹೊಡೆದರು.

ಗುರಿ ಬೆನ್ನಟ್ಟಿದ ದೆಹಲಿ ತಂಡವು 21.4 ಓವರ್‌ಗಳಲ್ಲಿ 4 ವಿಕೆಟ್‌ಗಳೀಗೆ 182 ರನ್ ಗಳಿಸಿತು. ಪ್ರಿಯಾಂಶ್ ಆರ್ಯ 41 ಎಸೆತಗಳಲ್ಲಿ 80 ರನ್ ಗಳಿಸಿದರು. ರಿಷಭ್ ಪಂತ್ 9 ಎಸೆತಗಳಲ್ಲಿ 24 ರನ್ ಗಳಿಸಿದರು. 3 ಸಿಕ್ಸರ್ ಸಿಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.