ADVERTISEMENT

ವಿಜಯ್ ಹಜಾರೆ ಟ್ರೋಫಿ ಫೈನಲ್‌: 'ಬರ್ತಡೇ ಬಾಯ್' ಅಭಿಮನ್ಯು ಮಿಥುನ್‌ ಹ್ಯಾಟ್ರಿಕ್

ಕ್ರಿಕೆಟ್ ಟೂರ್ನಿ

ಗಿರೀಶದೊಡ್ಡಮನಿ
Published 25 ಅಕ್ಟೋಬರ್ 2019, 9:31 IST
Last Updated 25 ಅಕ್ಟೋಬರ್ 2019, 9:31 IST
ಅಭಿಮನ್ಯು ಮಿಥುನ್
ಅಭಿಮನ್ಯು ಮಿಥುನ್   

ಬೆಂಗಳೂರು: ಹ್ಯಾಟ್ರಿಕ್ ಸಾಧನೆ ಮತ್ತು ಐದು ವಿಕೆಟ್‌ಗಳ ಗೊಂಚಲು ಗಳಿಸಿದ ‘ಪಿಣ್ಯ ಎಕ್ಸ್‌ಪ್ರೆಸ್‌’ ಅಭಿಮನ್ಯು ಮಿಥುನ್ ತಮಿಳುನಾಡು ತಂಡವನ್ನು ದೂಳೀಪಟ ಮಾಡಿದರು.

ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಫೈನಲ್‌ನಲ್ಲಿ ಮಿಥುನ್ (34ಕ್ಕೆ5) ಪರಿಣಾಮಕಾರಿ ದಾಳಿಯಿಂದಾಗಿ ತಮಿಳುನಾಡು ತಂಡವು 49.5 ಓವರ್‌ಗಳಲ್ಲಿ252 ರನ್‌ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿ ಮಿಥುನ್ ಎಸೆತದಲ್ಲಿ ಮುರಳಿ ವಿಜಯ್ ವಿಕೆಟ್‌ಕೀಪರ್ ರಾಹುಲ್‌ಗೆ ಕ್ಯಾಚಿತ್ತರು. ಮಧ್ಯಮ ಕ್ರಮಾಂಕದಲ್ಲಿ ವಿಜಯಶಂಕರ್ (38 ರನ್) ಅವರ ವಿಕೆಟ್ ಅನ್ನೂ 46ನೇ ಓವರ್‌ನಲ್ಲಿ ಕಬಳಿಸಿದ ಮಿಥುನ್ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಸಲೀಂ, ಅಶ್ವಿನ್ ಮುರುಗನ್ ಮತ್ತು ಶಾರೂಕ್ ಖಾನ್ ವಿಕೆಟ್‌ಗಳನ್ನು ಗಳಿಸಿ ಹ್ಯಾಟ್ರಿಕ್ ಸಾಧಿಸಿದರು. ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಮತ್ತು ಗೌತಮ್ ಅವರು ಪಡೆದ ಅದ್ಭುತ ಕ್ಯಾಚ್‌ಗಳಿಂದಾಗಿ ಮಿಥುನ್ ಹ್ಯಾಟ್ರಿಕ್ ಕನಸು ನನಸಾಯಿತು.

ADVERTISEMENT

ಸ್ಕೋರು ವಿವರ:ತಮಿಳುನಾಡು252 (49.5 ಓವರ್‌ಗಳಲ್ಲಿ)

ಅಭಿನವ್ ಮುಕುಂದ್ ಸಿ ಮಯಂಕ್ ಅಗರವಾಲ್ ಬಿ ಪ್ರತೀಕ್ ಜೈನ್ 85

ಮುರಳಿ ವಿಜಯ್ ಸಿ ಕೆ.ಎಲ್. ರಾಹುಲ್ ಬಿ ಅಭಿಮನ್ಯು ಮಿಥುನ್ 00

ಅಶ್ವಿನ್ ರವಿಚಂದ್ರನ್ ಸಿ ಕೆ.ಎಲ್. ರಾಹುಲ್ ಬಿ ಕೌಶಿಕ್ ವಾಸುಕಿ 08

ಬಾಬಾ ಅಪರಾಜಿತ್ ರನ್‌ಔಟ್ (ಮನೀಷ್ ಪಾಂಡೆ) 66

ವಿಜಯಶಂಕರ್ ಸಿ ಕರುಣ್ ನಾಯರ್ ಬಿ ಅಭಿಮನ್ಯು ಮಿಥುನ್ 38

ದಿನೇಶ್ ಕಾರ್ತಿಕ್ ಸಿ ಕೆ.ಎಲ್. ರಾಹುಲ್ ಬಿ ಗೌತಮ್ ಕೃಷ್ಣಪ್ಪ 11

ಶಾರೂಕ್‌ ಖಾನ್ ಸಿ ಮನೀಷ್ ಪಾಂಡೆ ಬಿ ಅಭಿಮನ್ಯು ಮಿಥುನ್ 27

ವಾಷಿಂಗ್ಟನ್ ಸುಂದರ್ ಸಿ ಮನೀಷ್ ಪಾಂಡೆ ಬಿ ಕೌಶಿಕ್ ವಾಸುಕಿ 02

ಮೊಹಮ್ಮದ್ ಸಲೀಂ ಸಿ ದೇವದತ್ತ ಪಡಿಕ್ಕಲ್ ಬಿ ಅಭಿಮನ್ಯು ಮಿಥುನ್ 10

ಅಶ್ವಿನ್ ಮುರುಗನ್ ಸಿ ಗೌತಮ್ ಕೃಷ್ಣಪ್ಪ ಬಿ ಅಭಿಮನ್ಯು ಮಿಥುನ್ 00

ಟಿ. ನಟರಾಜನ್ ಔಟಾಗದೆ 00

ಇತರೆ: 5 (ವೈಡ್ 3, ಬೈ 1)

ವಿಕೆಟ್ ಪತನ: 1–1 (ವಿಜಯ್;0.6), 2–24 (ಅಶ್ವಿನ್;7.6), 3–148 (ಮುಕುಂದ್; 30.6), 4–178 (ಬಾಬಾ; 37.2), 5–193 (ದಿನೇಶ್;41.4), 6–224 (ವಿಜಯಶಂಕರ್;45.4), 7–230 (ಸುಂದರ್‌; 46.6),

ಬೌಲಿಂಗ್:ಅಭಿಮನ್ಯು ಮಿಥುನ್ 9.5–0–34–5, ಕೌಶಿಕ್ ವಾಸುಕಿ 9–0–39–2, ಪ್ರತೀಕ್ ಜೈನ್ 9–0–55–1, ಗೌತಮ್ ಕೃಷ್ಣಪ್ಪ 10–0–48–1, ಪ್ರವೀಣ ದುಬೆ 6–0–47–0, ಕರುಣ ನಾಯರ್ 6–0–27–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.