ADVERTISEMENT

Not Out 542 Runs: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ವಿಶ್ವ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2025, 9:10 IST
Last Updated 5 ಜನವರಿ 2025, 9:10 IST
<div class="paragraphs"><p>ಕರುಣ್‌ ನಾಯರ್‌</p></div>

ಕರುಣ್‌ ನಾಯರ್‌

   

ಬೆಂಗಳೂರು: ವಿಜಯ್‌ ಹಜಾರೆ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಕರುಣ್‌ ನಾಯರ್‌, ರನ್ ಗಳಿಕೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.

ವಿದರ್ಭ ತಂಡದ ನಾಯಕನಾಗಿ ಆಡುತ್ತಿರುವ ಕರುಣ್‌, ಈ ಬಾರಿ ಬ್ಯಾಟ್‌ ಬೀಸಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕ ಬಾರಿಸಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಅಜೇಯ ಆಟವಾಡಿದ್ದ ಕರುಣ್‌, 5ನೇ ಪಂದ್ಯದಲ್ಲಿ ಔಟಾಗಿದ್ದಾರೆ.

ADVERTISEMENT

ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 112 ರನ್‌ ಗಳಿಸಿದ್ದ ಅವರು, ನಂತರದ ಮೂರು ಪಂದ್ಯಗಳಲ್ಲಿ ಛತ್ತೀಸಗಢ, ಚಂಡೀಗಢ, ತಮಿಳುನಾಡು ವಿರುದ್ಧ ಕ್ರಮವಾಗಿ 44 ರನ್‌, 163 ರನ್‌ ಹಾಗೂ 111 ರನ್‌ ಗಳಿಸಿದ್ದರು. ಶುಕ್ರವಾರ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ 112 ರನ್‌ ಗಳಿಸಿದ್ದಾಗ ವಿಕೆಟ್‌ ಒಪ್ಪಿಸಿದರು.

ಇದರೊಂದಿಗೆ ಟೂರ್ನಿಯಲ್ಲಿ ಮೊದಲ ಬಾರಿಗೆ ವಿಕೆಟ್‌ ಒಪ್ಪಿಸಿದರು. ಔಟಾಗುವ ಮುನ್ನ ಅವರು ಗಳಿಸಿದ ಒಟ್ಟು ರನ್‌ ಬರೋಬ್ಬರಿ 542. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ.

ನ್ಯೂಜಿಲೆಂಡ್‌ನ ಜೇಮ್ಸ್‌ ಫ್ರಾಂಕ್ಲಿನ್‌ ಅವರು 2010ರಲ್ಲಿ 527 ರನ್‌ ಗಳಿಸಿದ್ದು, ಈವರೆಗೆ ದಾಖಲೆಯಾಗಿತ್ತು.

ದಕ್ಷಿಣ ಆಫ್ರಿಕಾದ ಜೋಶುವಾ ವಾನ್‌ ಹೀರ್ದನ್‌ (512 ರನ್‌), ಪಾಕಿಸ್ತಾನದವರಾದ ಫಖರ್‌ ಜಮಾನ್‌ (455 ರನ್‌) ಹಾಗೂ ತಫೀಕ್‌ ಉಮರ್‌ (422 ರನ್‌) ನಂತರದ ಸ್ಥಾನಗಳಲ್ಲಿ ಇದ್ದಾರೆ.

'ಡಿ' ಗುಂಪಿನಲ್ಲಿ ಅಗ್ರಸ್ಥಾನ
ಟೂರ್ನಿಯಲ್ಲಿ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ವಿದರ್ಭ, ಆಂಧ್ರ ಪ್ರದೇಶದ ವಿಜಿಯಾನಗರಂನಲ್ಲಿ ಇಂದು ಮಿಜೋರಾಂ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ, ಆಡಿರುವ ಆರೂ ಪಂದ್ಯಗಳಲ್ಲಿ ಜಯ ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.