ADVERTISEMENT

ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕ ತಂಡ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 15:44 IST
Last Updated 9 ಡಿಸೆಂಬರ್ 2024, 15:44 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಸುಕೃತ್ ಜೆ. (ಅಜೇಯ 81; 105) ಅವರ ಬ್ಯಾಟಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಮರ್ಚೆಂಟ್‌ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಆಂಧ್ರಪ್ರದೇಶದ ಮಂಗಳಗಿರಿಯ ಎಸಿಎ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಪಂದ್ಯದ ಕೊನೆಯ ದಿನವಾದ ಸೋಮವಾರ ಕರ್ನಾಟಕ ತಂಡವು 6 ವಿಕೆಟ್‌ಗಳಿಂದ ವಿದರ್ಭ ತಂಡವನ್ನು ಮಣಿಸಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 25 ರನ್‌ಗಳ ಕೊಂಚ ಮುನ್ನಡೆ ಪಡೆದಿದ್ದ ವಿದರ್ಭ ತಂಡವು ಎರಡನೇ ಇನಿಂಗ್ಸ್‌ನಲ್ಲಿ 68.2 ಓವರ್‌ಗಳಲ್ಲಿ 156 ರನ್‌ಗೆ ಕುಸಿಯಿತು. ಧ್ಯಾನ್‌ ಎಂ. ಹಿರೇಮಠ ಐದು ವಿಕೆಟ್‌ ಪಡೆದು, ಎದುರಾಳಿ ತಂಡವನ್ನು ಚೇತರಿಸಿಕೊಳ್ಳದಂತೆ ನೋಡಿಕೊಂಡಿದ್ದರು.

ಗೆಲುವಿಗೆ 181 ರನ್‌ಗಳ ಗುರಿಯನ್ನು ಪಡೆದ ಕರ್ನಾಟಕಕ್ಕೆ ಆರಂಭದಲ್ಲಿ ಎದುರಾಳಿ ಬೌಲರ್‌ಗಳು ಪೆಟ್ಟು ನೀಡಿದ್ದರು. ಹೀಗಾಗಿ, 49 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸುಕೃತ್ ಮತ್ತು ಆರುಷ್‌ ಜೈನ್‌ (49;126ಎ) ತಾಳ್ಮೆಯ ಆಟವಾಡಿ, ಮುರಿಯದ ಐದನೇ ವಿಕೆಟ್‌ ಜೊತೆಯಾಟದಲ್ಲಿ 133 ರನ್‌ ಸೇರಿಸಿದರು. ಹೀಗಾಗಿ, ತಂಡವು 51.1 ಓವರ್‌ಗಳಲ್ಲಿ 4 ವಿಕೆಟ್‌ಗೆ 182 ರನ್‌ ಗಳಿಸಿ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌

ವಿದರ್ಭ: 77.5 ಓವರ್‌ಗಳಲ್ಲಿ 203 (ಕುಶ್ ಶರ್ಮಾ 49, ಸುಜಿತ್ ವೇಲನ್ ಬಿ. 23ಕ್ಕೆ2, ಅಯಾನ್ ಎಸ್.ಕೆ. 42ಕ್ಕೆ 2, ಧ್ಯಾನ್ ಎಂ. ಹಿರೇಮಠ 59ಕ್ಕೆ 3).

ಕರ್ನಾಟಕ: 67 ಓವರ್‌ಗಳಲ್ಲಿ 178 (ಅರ್ಣವ್‌ ದ್ರಾವಿಡ್‌ 57; ವಿರಾಜ್ ಮಹೇಶ್ವರಿ 19ಕ್ಕೆ 2, ಕುಶ್ ಶರ್ಮಾ 27ಕ್ಕೆ 6).

ಎರಡನೇ ಇನಿಂಗ್ಸ್‌

ವಿದರ್ಭ: 68.2 ಓವರ್‌ಗಳಲ್ಲಿ 156 (ಕುಶ್‌ ಶರ್ಮಾ 41; ಅಥರ್ವ್ ಎಸ್. ದೇಶಪಾಂಡೆ 26ಕ್ಕೆ 2, ಧ್ಯಾನ್ ಎಂ. ಹಿರೇಮಠ 49ಕ್ಕೆ 5, ಅಯಾನ್ ಎಸ್.ಕೆ. 30ಕ್ಕೆ 2).

ಕರ್ನಾಟಕ: 51.1 ಓವರ್‌ಗಳಲ್ಲಿ 4ಕ್ಕೆ 182 (ಸುಕೃತ್‌ ಜೆ. ಔಟಾಗದೇ 81, ಆರುಷ್‌ ಜೈನ್‌ ಔಟಾಗದೇ 49; ಸ್ಪರ್ಶ ಬೋರ್ಕರ್ 44ಕ್ಕೆ 2).

ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ ಜಯ, 6 ಅಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.