ADVERTISEMENT

ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

ಪಿಟಿಐ
Published 22 ಫೆಬ್ರುವರಿ 2026, 23:52 IST
Last Updated 22 ಫೆಬ್ರುವರಿ 2026, 23:52 IST
<div class="paragraphs"><p>ವಿನಯಕುಮಾರ್</p></div>

ವಿನಯಕುಮಾರ್

   

ಹುಬ್ಬಳ್ಳಿ: ಸತತ ಎರಡು ಬಾರಿ ರಣಜಿ ಟ್ರೋಫಿ ಜಯಿಸಿದ ನಾಯಕನೆಂಬ ದಾಖಲೆ ಹೊಂದಿರುವ ಕರ್ನಾಟಕ ಕ್ರಿಕೆಟ್ ತಂಡದ ಏಕೈಕ ನಾಯಕನೆಂಬ ಹೆಗ್ಗಳಿಕೆ ಇರುವುದು ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಅವರಿಗೆ ಮಾತ್ರ. 2013–14 ಮತ್ತು 2014–15ರಲ್ಲಿ ಕರ್ನಾಟಕವು ರಣಜಿ ಟ್ರೋಫಿ ಜಯಿಸಿತ್ತು. ಅದರ ನಂತರ ಈ ವರ್ಷ ಫೈನಲ್ ಪ್ರವೇಶಿಸಿದೆ.  ಒಟ್ಟಾರೆ ಒಂಬತ್ತನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ವಿನಯ್ ಅವರಿಗೂ ಕರ್ನಾಟಕ ವಿಜಯ ಸಾಧಿಸಲಿದೆ ಎಂಬ ವಿಶ್ವಾಸವಿದೆ.

‘ದೇವದತ್ತ ಪಡಿಕ್ಕಲ್ ನಾಯಕತ್ವದ ತಂಡವು ಸಮತೋಲನದಿಂದ ಕೂಡಿದೆ. ಕೆ.ಎಲ್. ರಾಹುಲ್, ಮಯಂಕ್ (ಅಗರವಾಲ್), ಕರುಣ್ ನಾಯರ್, ದೇವದತ್ತ ಅವರು ಅನುಭವಿಗಳಾಗಿದ್ದಾರೆ. ಟೆಸ್ಟ್ ಆಟಗಾರರಾಗಿರುವ ಅವರಿಗೆ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಆಡುವ ಸಾಮರ್ಥ್ಯ ಚೆನ್ನಾಗಿದೆ’ ಎಂದು ವಿನಯ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ADVERTISEMENT

‘ತಂತ್ರಗಾರಿಕೆಯ ವಿಷಯ ಬಂದಾಗ ದೇವದತ್ತ ಬಹಳ ಚಾಣಾಕ್ಷರಾಗಿದ್ದಾರೆ. ಅಲ್ಲದೇ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಗೆಲುವಿನ ಹಾದಿ ತೋರಿಸಬಲ್ಲರು. ಈ ಟೂರ್ನಿಯಲ್ಲಿ ಪಂಜಾಬ್ ಎದುರಿನ ಪಂದ್ಯ ಅದಕ್ಕೆ ಸಾಕ್ಷಿ. 30 ಓವರ್‌ಗಳಲ್ಲಿ 250 ರನ್‌ಗಳನ್ನು ಬೆನ್ನಟ್ಟುವ ಸವಾಲನ್ನು ನಿಭಾಯಿಸಿದ ರೀತಿ ಅಮೋಘವಾದುದು’ ಎಂದರು. 

‘ಬೌಲಿಂಗ್ ವಿಭಾಗವು ಸಮರ್ಥವಾಗಿದೆ. ಪ್ರಸಿದ್ಧ (ಕೃಷ್ಣ), ವಿದ್ವತ್ (ಕಾವೇರಪ್ಪ), ವೈಶಾಖ (ವಿಜಯಕುಮಾರ್) ಮತ್ತು ವಿದ್ಯಾಧರ್ ಪಾಟೀಲ ಅವರು ತುಂಬಾ ಒಳ್ಳೆಯ ಫಾರ್ಮ್‌ನಲ್ಲಿದ್ಧಾರೆ. ಅಲ್ಲದೇ ಶ್ರೇಯಸ್ ಗೋಪಾಲ್ ಅವರು ಈಚೆಗಷ್ಟೇ 300ನೇ ವಿಕೆಟ್ ಪಡೆದಿದ್ದಾರೆ’ ಎಂದು ವಿನಯ್ ಹೇಳಿದರು. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಮಂಗಳವಾರದಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು–ಕಾಶ್ಮೀರ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.