ADVERTISEMENT

IND vs SA Final | ವಿರಾಟ್ ಕೊಹ್ಲಿ ಶತಕ: ಕ್ಷಣಮಾತ್ರದಲ್ಲಿ ಭರ್ತಿಯಾದ ಇಡೀ ಮೈದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 12:39 IST
Last Updated 5 ಡಿಸೆಂಬರ್ 2025, 12:39 IST
<div class="paragraphs"><p>Virat Kohli | ರಾಂಚಿಯಲ್ಲಿ ವಿರಾಟ್ ಕೊಹ್ಲಿ ಶತಕದ ಅಬ್ಬರ: ಚಿತ್ರಗಳಲ್ಲಿ ನೋಡಿ</p></div>

Virat Kohli | ರಾಂಚಿಯಲ್ಲಿ ವಿರಾಟ್ ಕೊಹ್ಲಿ ಶತಕದ ಅಬ್ಬರ: ಚಿತ್ರಗಳಲ್ಲಿ ನೋಡಿ

   

– ಪಿಟಿಐ ಚಿತ್ರ

ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಸಿಡಿಸಿದ ಎರಡು ಸತತ ಶತಕಗಳು ವಿಶಾಖಪಟ್ಟಣ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರುವಂತೆ ಮಾಡಿದೆ. ಈ ಮೊದಲು ವಿಶಾಕಪಟ್ಟಣದಲ್ಲಿ ನಡೆಯುವ ಏಕದಿನ ಪಂದ್ಯಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ ಎಂಬ ಆರೋಪವಿತ್ತು.

ADVERTISEMENT

ಆದರೆ, ಈ ಆರೋಪಕ್ಕೆ ತದ್ವಿರುದ್ದ ಎಂಬಂತೆ ನಾಳೆ (ಶನಿವಾರ) ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಏಕದಿನ ಪಂದ್ಯದ ಎಲ್ಲಾ ಟಿಕೆಟ್‌ಗಳು ಖರೀದಿಯಾಗಿವೆ. ಇದಕ್ಕೆ ವಿರಾಟ್ ಕೊಹ್ಲಿ ಸಿಡಿಸಿದ ಶತಕಗಳು ಕಾರಣವಾಗಿವೆ.

ನವೆಂಬರ್ 28ರಂದು ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮೊದಲು ಟಿಕೆಟ್ ಖರೀದಿಸಲು ಪ್ರೇಕ್ಷಕರು ನೀರಸ‍ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆದರೆ, ಮೊದಲ ಪಂದ್ಯದ ಬಳಿಕ ರಾಯಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯಕ್ಕೆ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು ಇದಕ್ಕೆ ಕಾರಣ ವಿರಾಟ್ ಕೊಹ್ಲಿ ರಾಂಚಿಯಲ್ಲಿ ಸಿಡಿಸಿದ್ದ ಶತಕ. ಈ ನಡುವೆ ನಾಳೆ (ಶನಿವಾರ) ನಡೆಯಲಿರುವ ಪಂದ್ಯದ ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿವೆ ಎಂದು ಎಸಿಎ ತಿಳಿಸಿದೆ.

ಎಸಿಎ ಮಾಧ್ಯಮ ಮತ್ತು ಕಾರ್ಯಾಚರಣೆ ತಂಡದ ವೈ. ವೆಂಕಟೇಶ್ ಪ್ರತಿಕ್ರಿಯೆ ನೀಡಿ, ‘ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿತ್ತು. ಆದರೆ, ವಿರಾಟ್ ಕೊಹ್ಲಿ ಶತಕ ಸಿಡಿಸಿದ ಬಳಿಕ ರಾಯಪುರ ಮತ್ತು ನಾಳಿನ ವಿಶಾಖಪಟ್ಟಣಂನ ಪಂದ್ಯದ ಟಿಕೆಟ್‌ಗಳು ಕೆಲವೇ ಕ್ಷಣದಲ್ಲಿ ಮಾರಾಟವಾಗಿವೆ’ ಎಂದು ತಿಳಿಸಿದ್ದಾರೆ.

ಸದ್ಯ, 1,200 ರೂಪಾಯಿಯಿಂದ 18,000 ದವರೆಗಿನ ಟಿಕೆಟ್‌ಗಳನ್ನು ಅಭಿಮಾನಿಗಳು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು, ವಿಶಾಖಪಟ್ಟಣದಲ್ಲಿನ ವಿರಾಟ್ ಕೊಹ್ಲಿಯವರ ದಾಖಲೆ, ಈ ಮೈದಾನದಲ್ಲಿ ಕೊಹ್ಲಿ ಆಡಿರುವ 7 ಏಕದಿನ ಪಂದ್ಯಗಳಲ್ಲಿ 3 ಶತಕ, 1 ಅರ್ಧಶತಕ ಭಾರಿಸಿದ್ದಾರೆ. ಹಾಗೂ 97.83 ಸರಾಸರಿ ಹೊಂದಿದ್ದಾರೆ.

ಇನ್ನು ವಿಶಾಖಪಟ್ಟಣ ಪಂದ್ಯಕ್ಕಾಗಿ ವೈಜಾಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರದಂದು ರಾಯಪುರದಿಂದ ಬಂದಿಳಿದ ವಿರಾಟ್ ಕೊಹ್ಲಿ ಕಾಣಲು ಅಭಿಮಾನಿಗಳು ಕಕ್ಕಿರಿದು ಸೇರಿದ್ದರು. ಕೊಹ್ಲಿ ಆಗಮಿಸುವುದು ತಡವಾದರೂ ಕೂಡ ಅಭಿಮಾನಿಗಳು ವಿಮಾನ ನಿಲ್ದಾಣ ಬಿಟ್ಟು ಕದಲಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.