ADVERTISEMENT

ಟೀಂ ಇಂಡಿಯಾ ಸದಸ್ಯರ ಫೋಟೊ ಟ್ವೀಟಿಸಿದ ವಿರಾಟ್ ಕೊಹ್ಲಿ, ರೋಹಿತ್ ಎಲ್ಲಿ? 

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 7:35 IST
Last Updated 2 ಆಗಸ್ಟ್ 2019, 7:35 IST
   

ನವದೆಹಲಿ: ಟಿ20 ಪಂದ್ಯಕ್ಕಾಗಿ ಅಮೆರಿಕದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ಕೊಹ್ಲಿ ಶುಕ್ರವಾರ ಬೆಳಗ್ಗೆ ತಂಡದ ಸದಸ್ಯರ ಫೋಟೊವೊಂದನ್ನು ಟ್ವೀಟಿಸಿದ್ದಾರೆ.

SQUAD ಎಂಬ ಶೀರ್ಷಿಕೆ ನೀಡಿ ಟ್ವೀಟಿಸಿದ ಈ ಗ್ರೂಪ್ ಫೋಟೊದಲ್ಲಿ ಕೊಹ್ಲಿಯೊಂದಿಗೆ ರವೀಂದ್ರ ಜಡೇಜಾ, ನವ್‌ದೀಪ್ ಸೈನಿ, ಖಲೀಲ್ ಅಹ್ಮದ್,ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಕೆ.ಎಲ್. ರಾಹುಲ್ ಇದ್ದಾರೆ.ಆದರೆ ತಂಡದ ಉಪ ನಾಯಕ ರೋಹಿತ್ ಶರ್ಮಾ ಈ ಫೋಟೊದಲ್ಲಿಲ್ಲ.

ಈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ರೋಹಿತ್ ಎಲ್ಲಿ ಎಂದು ಕೇಳಿದ್ದಾರೆ.

ADVERTISEMENT

ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ಮತ್ತು ಕೊಹ್ಲಿ ನಡುವೆ ಶೀತಲ ಸಮರವೇರ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.ಆದರೆ ಅಮೆರಿಕ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೊರಡುವ ಮುನ್ನ ಸುದ್ದಿಗೋಷ್ಠಿ ನಡೆಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಅದೆಲ್ಲವೂ ವದಂತಿ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.