ADVERTISEMENT

ಕೊಹ್ಲಿ ವಿದಾಯ ಹೇಳಿದ್ದು ಫಾರ್ಮ್ ಸಮಸ್ಯೆಯಿಂದಲ್ಲ, ಕಾರಣ ಬೇರೆಯೇ ಇದೆ: ಮಾಜಿ ಕೋಚ್

ಪಿಟಿಐ
Published 6 ಜೂನ್ 2025, 2:31 IST
Last Updated 6 ಜೂನ್ 2025, 2:31 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ಗ್ರೇಗ್‌ ಚಾಪೆಲ್‌</p><p></p></div>

ವಿರಾಟ್‌ ಕೊಹ್ಲಿ ಹಾಗೂ ಗ್ರೇಗ್‌ ಚಾಪೆಲ್‌

   

Photo: PTI, DH / Srikanta Sharma R

ADVERTISEMENT

ಮೆಲ್ಬರ್ನ್‌: ಭಾರತ ಕ್ರಿಕೆಟ್‌ ತಂಡದ ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಫಾರ್ಮ್‌ ಸಮಸ್ಯೆಯಿಂದಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಟೀಂ ಇಂಡಿಯಾದ ಮಾಜಿ ಕೋಚ್‌ ಗ್ರೇಗ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಾಲದಲ್ಲಿ ಕಾಂಗರೂ ನಾಡಿನ ತಂಡದ ಶ್ರೇಷ್ಠ ಬ್ಯಾಟರ್‌ ಎನಿಸಿದ್ದ ಚಾಪೆಲ್‌, ಅತ್ಯುನ್ನದ ಮಟ್ಟದಲ್ಲಿ ಆಡಲು ಬೇಕಾದ ಮಾನಸಿಕ ಸ್ಪಷ್ಟತೆ ಅವರಲ್ಲಿ (ವಿರಾಟ್‌ ಕೊಹ್ಲಿ) ಇರಲಿಲ್ಲ. ಹಾಗಾಗಿಯೇ, ಟೆಸ್ಟ್ ತೊರೆದಿದ್ದಾರೆ ಎಂದು 'ESPNcricinfo'ಗೆ ಬರೆದ ಅಂಕಣದಲ್ಲಿ ಬರೆದಿದ್ದಾರೆ.

'ಕೌಶ್ಯಲ್ಯದ ಮಟ್ಟ ಕುಸಿದಿದ್ದರಿಂದ ಈ ನಿರ್ಧಾರ ಬಂದಿಲ್ಲ. ಬದಲಾಗಿ, ಒಂದು ಕಾಲದಲ್ಲಿ 'ಅಸಾಧಾರಣ' ಆಟಗಾರ ಎಂಬಂತೆ ಕಾಣಲು ಕಾರಣವಾಗಿದ್ದ ತನ್ನಲ್ಲಿನ ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳಲು ಇನ್ನುಮುಂದೆ ಸಾಧ್ಯವಿಲ್ಲ ಎಂಬ ಅರಿವಿನಿಂದ ಈ ನಿರ್ಧಾರ  ಕೈಗೊಳ್ಳಲಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ಅತ್ಯುನ್ನತ ಮಟ್ಟದಲ್ಲಿ ಆಡುವಾಗ ಮನಸ್ಸು ಅತ್ಯಂತ ಚುರುಕಾಗಿರಬೇಕು. ಅದರ ಪಾತ್ರ ನಿರ್ಣಾಯಕವಾಗಿರುತ್ತದೆ. ಇಲ್ಲದಿದ್ದರೆ, ದೇಹ ಸ್ಪಂದಿಸುವುದಿಲ್ಲ ಎಂಬುದನ್ನು ಅವರು (ವಿರಾಟ್‌ ಕೊಹ್ಲಿ) ಒಪ್ಪಿಕೊಂಡಿದ್ದಾರೆ' ಎಂದಿದ್ದಾರೆ ಚಾಪೆಲ್‌.

ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 30 ಶತಕ ಸಹಿತ 9,230 ರನ್‌ ಕಲೆಹಾಕಿದ್ದ ವಿರಾಟ್‌ ಕೊಹ್ಲಿ, ಕಳೆದ ತಿಂಗಳು ಈ ಮಾದರಿಗೆ ವಿದಾಯ ಘೊಷಿಸಿದ್ದರು.

ಆಟಗಾರನಲ್ಲಿ ತನ್ನ ಸಾಮರ್ಥ್ಯದ ಕುರಿತು ಸೃಷ್ಟಿಯಾಗುವ ಅನುಮಾನವು, ಆತನ ಸ್ವಾಭಾವಿಕ ಆಟದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂದು ಚಾಪೆಲ್‌ ಹೇಳಿದ್ದಾರೆ.

'ಮನಸ್ಸಿನಲ್ಲಿ ಅನುಮಾನ ನೆಲೆಗೊಳ್ಳಲಾರಂಭಿಸಿದಾಗ, ಅದು ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆ ಮತ್ತು ಪಾದದ ಚಲನೆಯನ್ನು ಕುಗ್ಗಿಸುತ್ತದೆ. ಅತ್ಯುತ್ತಮ ಆಟಕ್ಕೆ ಬೇಕಾದ ಸ್ವಾಭಾವಿಕತೆಯನ್ನು ನಾಶಮಾಡುತ್ತದೆ. ಕೊಹ್ಲಿಯ ನಿವೃತ್ತಿ ನಿರ್ಧಾರವು ಫಾರ್ಮ್ ಎಂಬುದು ಯಾಂತ್ರಿಕ ಅಂಶ ಎಂಬುದಕ್ಕಿಂತಲೂ, ಮಾನಸಿಕ ಕಾರ್ಯ ಎಂಬುದನ್ನು ನೆನಪಿಸುತ್ತದೆ' ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.