ADVERTISEMENT

ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಮ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:50 IST
Last Updated 16 ಜುಲೈ 2022, 14:50 IST
ಪಂದ್ಯವೊಂದರಲ್ಲಿ ಬಾಬರ್‌ ಅಜಮ್‌ ಮತ್ತು ವಿರಾಟ್‌ ಕೊಹ್ಲಿ ಆತ್ಮೀಯ ಕ್ಷಣ - ಐಎಎನ್‌ಎಸ್‌ ಚಿತ್ರ
ಪಂದ್ಯವೊಂದರಲ್ಲಿ ಬಾಬರ್‌ ಅಜಮ್‌ ಮತ್ತು ವಿರಾಟ್‌ ಕೊಹ್ಲಿ ಆತ್ಮೀಯ ಕ್ಷಣ - ಐಎಎನ್‌ಎಸ್‌ ಚಿತ್ರ    

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ ಅವರು ಫಾರ್ಮ್‌ ಸಮಸ್ಯೆ ಬಗ್ಗೆ ಹಲವರು ಟೀಕೆಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮಾಡಿದ್ದ ಬಾಬರ್‌ ಅಜಮ್‌, 'ಇದೂ ಸಾಗಿಹೋಗಲಿದೆ, ಗಟ್ಟಿಯಾಗಿರಿ' ಎಂದು ಬರೆದಿದ್ದರು.

ಇದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಕೊಹ್ಲಿ, ‘ಧನ್ಯವಾದಗಳು. ಹೀಗೇ ಮಿಂಚುತ್ತಿರಿ ಮತ್ತು ಮೇಲೇರುತ್ತಿರಿ. ನಿಮಗೆ ಶುಭವಾಗಲಿ’ ಎಂದು ಕೊಹ್ಲಿ ಹೇಳಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್‌ ಅಭಿಮಾನಿಯೊಬ್ಬರು, ‘ಇದನ್ನೇ ಕ್ರೀಡಾ ಸ್ಪೂರ್ತಿ ಎಂದು ಕರೆಯಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಾಬರ್‌ ಅಜಮ್‌ ಅವರ ಟ್ವೀಟ್‌ಗೆ ಕೊಹ್ಲಿ ಪ್ರತಿಕ್ರಿಯಿಸಲಾರರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಶಾಹೀದ್‌ ಅಫ್ರಿದಿ ಕೊಂಕು ನುಡಿದಿದ್ದರು. ಆದರೆ, ಪ್ರತಿಕ್ರಿಯೆ ನೀಡುವ ಮೂಲಕ ಕೊಹ್ಲಿ, ಅಫ್ರಿದಿ ಊಹೆಯನ್ನು ಸುಳ್ಳಾಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.