ವಿರಾಟ್ ಕೊಹ್ಲಿ
– ಪಿಟಿಐ ಚಿತ್ರ
ನವದೆಹಲಿ: ಡಿಸೆಂಬರ್ 24ರಂದು ಆರಂಭವಾಗುವ ವಿಜಯ್ ಹಜಾರೆ ಟ್ರೋಫಿಗೆ ಭಾರತದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಲಭ್ಯತೆಯನ್ನು ಖಚಿತಪಡಿಸಿದ್ದಾರೆ ಎಂದು ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ತಿಳಿಸಿದ್ದಾರೆ.
37 ವರ್ಷ ವಯಸ್ಸಿನ ಕೊಹ್ಲಿ 2010ರಲ್ಲಿ ಸರ್ವಿಸಸ್ ವಿರುದ್ಧ ಕೊನೆಯ ಬಾರಿ ವಿಜಯ್ ಹಜಾರೆ ಟ್ರೋಫಿ ಪಂದ್ಯ ಆಡಿದ್ದರು. 2024ರಲ್ಲಿ ಬಾರ್ಬಾಡೋಸ್‌ನಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಚುಟುಕು ಮಾದರಿಗೆ ವಿದಾಯ ಹೇಳಿದ್ದ ಕೊಹ್ಲಿ ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಪ್ರಕಟಿಸಿದ್ದರು.
ಡೆಲ್ಲಿ ತಂಡವು ಡಿಸೆಂಬರ್ 24ರಂದು ಬೆಂಗಳೂರಿನಲ್ಲಿ ಆಂಧ್ರ ವಿರುದ್ಧ ಆಡುವ ಮೂಲಕ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಡೆಲ್ಲಿ ತಂಡವು ಆರು ಪಂದ್ಯಗಳನ್ನು ಆಡಲಿದೆ.
ಕೇಂದ್ರೀಯ ಗುತ್ತಿಗೆಯಲ್ಲಿರುವ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಗಾಯಾಳಾದಲ್ಲಿ ಅಥವಾ ರಾಷ್ಟ್ರೀಯ ತಂಡಕ್ಕೆ ಆಡುತ್ತಿದ್ದರೆ ಮಾತ್ರ ವಿನಾಯಿತಿ ಸಿಗುತ್ತದೆ.
ರೋಹಿತ್ ಶರ್ಮಾ ಅವರು ಮುಂಬೈ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.