ADVERTISEMENT

ಮುಂಬೈ: ವಾಂಖೆಡೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿಗೆ ಕೋವಿಡ್‌

ಪಿಟಿಐ
Published 6 ಏಪ್ರಿಲ್ 2021, 13:12 IST
Last Updated 6 ಏಪ್ರಿಲ್ 2021, 13:12 IST
ಐಪಿಎಲ್ ಟ್ರೋಫಿ– ಇಂಡಿಯನ್ ಪ್ರೀಮಿಯರ್ ಲೀಗ್ ವೆಬ್‌ಸೈಟ್‌ ಚಿತ್ರ
ಐಪಿಎಲ್ ಟ್ರೋಫಿ– ಇಂಡಿಯನ್ ಪ್ರೀಮಿಯರ್ ಲೀಗ್ ವೆಬ್‌ಸೈಟ್‌ ಚಿತ್ರ   

ಮುಂಬೈ: ಐಪಿಎಲ್ ಕ್ರಿಕೆಟ್‌ ಟೂರ್ನಿಯ ಪಂದ್ಯಗಳಿಗೆ ಕ್ರೀಡಾಂಗಣಗಳನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದ ಒಂದು ದಿನದ ಬಳಿಕ ವಾಂಖೆಡೆ ಅಂಗಣದ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರಲ್ಲಿ ಕೋವಿಡ್‌–19 ದೃಢಪಟ್ಟಿದೆ.

ಈ ಋತುವಿನ ಐಪಿಎಲ್‌ ಟೂರ್ನಿಯ 10 ಪಂದ್ಯಗಳಿಗೆ ವಾಂಖೆಡೆ ಆತಿಥ್ಯ ವಹಿಸಬೇಕಿದೆ. ಇದೇ 10ರಂದು ಇಲ್ಲಿ ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.

‘ಒಬ್ಬ ಪ್ಲಂಬರ್‌ ಹಾಗೂ ಇಬ್ಬರು ಕ್ರೀಡಾಂಗಣ ಸಿಬ್ಬಂದಿಗೆ ಸೋಂಕು ತಗಲಿದೆ‘ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಮೂಲಗಳು ಮಂಗಳವಾರ ಹೇಳಿವೆ.

ADVERTISEMENT

ಕಳೆದ ಶನಿವಾರ 10 ಮಂದಿ ಕ್ರೀಡಾಂಗಣ ಸಿಬ್ಬಂದಿಗೆ ಕೋವಿಡ್ ಖಚಿತಪಟ್ಟಿತ್ತು. ಆದರೆ ಬಳಿಕ ಅವರಲ್ಲಿ ಬಹುತೇಕರು ಚೇತರಿಸಿಕೊಂಡಿದ್ದರು.

ವಾರಾಂತ್ಯದ ಲಾಕ್‌ಡೌನ್‌ ಹಾಗೂ ರಾತ್ರಿ ಕರ್ಫ್ಯೂನಂತಹ ಕ್ರಮಗಳ ಮಧ್ಯೆಯೂ ಆಟಗಾರರ ಅಭ್ಯಾಸಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ರಾತ್ರಿ 8 ಗಂಟೆಯ ನಂತರ ತಂಡಗಳಿಗೆ ಆಯಾ ಹೋಟೆಲ್‌ಗಳಿಂದ ಕ್ರೀಡಾಂಗಣಕ್ಕೆ ಅಭ್ಯಾಸ ಮಾಡಲು ಮತ್ತು ಪ್ರಯಾಣಿಸಲು ಅವಕಾಶ ನೀಡಿತ್ತು.

ಮಹಾರಾಷ್ಟ್ರದಲ್ಲಿಮಂಗಳವಾರ 47 ಸಾವಿರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ವರದಿಯಾಗಿವೆ. ಆ ಪೈಕಿ ಮುಂಬೈನಲ್ಲೇ 9 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.