ADVERTISEMENT

ಶೇನ್ ವಾರ್ನ್ ಮೆಚ್ಚಿದ ಭಾರತ ತಂಡದಲ್ಲಿ ಕೊಹ್ಲಿ, ಧೋನಿಯಿಲ್ಲ: ಗಂಗೂಲಿಗೆ ನಾಯಕತ್ವ

ಪಿಟಿಐ
Published 2 ಏಪ್ರಿಲ್ 2020, 2:54 IST
Last Updated 2 ಏಪ್ರಿಲ್ 2020, 2:54 IST
ಶೇನ್ ವಾರ್ನ್
ಶೇನ್ ವಾರ್ನ್   

ನವದೆಹಲಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅವರು ಸಾರ್ವಕಾಲಿಕ ಭಾರತ ಇಲೆವನ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆ ತಂಡದ ನಾಯಕತ್ವಕ್ಕೆ ಸೌರವ್ ಗಂಗೂಲಿಯನ್ನು ಹೆಸರಿಸಿದ್ದಾರೆ.

ಈ ತಂಡದಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ಕೂಡ ಇದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್ ಕೂಡ ಇದರಲ್ಲಿದ್ದಾರೆ.

‘ನಾನು ಆಡಿದ ಕಾಲಘಟ್ಟದಲ್ಲಿ ಆಡಿದ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿದ್ದೇನೆ. ಆದ್ದರಿಂದ ಈ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಸೇರಿಸಿಲ್ಲ’ ಎಂದು ವಾರ್ನ್‌ ಹೇಳಿದ್ದಾರೆ.

ADVERTISEMENT

ತಂಡ: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ನವಜ್ಯೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್‌ಕೀಪರ್), ಹರಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.