ವಾಷಿಂಗ್ಟನ್ ಸುಂದರ್
– ಪಿಟಿಐ ಚಿತ್ರ
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಗೆಲುವಿಗೆ ಗಮನಾರ್ಹ ಕಾಣಿಕೆ ನೀಡಿದ ವಾಷಿಂಗ್ಟನ್ ಸುಂದರ್ ಅವರು ‘ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರಿಸ್’ ಪದಕ ಸ್ವೀಕರಿಸಿದ್ದಾರೆ. ತನ್ಮೂಲಕ ಅವರು ಭಾರತದ ಪ್ರಭಾವಿ ಆಲ್‌ರೌಂಡರ್‌ಗಳಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿದ್ದಾರೆ.
ತಂಡದ ಮ್ಯಾನೇಜರ್ ರಾಹಿಲ್ ಖಾಜಾ ಅವರಿಂದ ಪದಕ ಸ್ವೀಕರಿಸುವಾಗ ಸುಂದರ್ ಅವರು ಖುಷಿಯಿಂದ ಮುಗುಳುನಗೆ ಬೀರುತ್ತಿರುವ ವಿಡಿಯೊವನ್ನು ‘ಡ್ರೆಸಿಂಗ್ ರೂಮ್ ಬಿಟಿಎಸ್’ ಶೀರ್ಷಿಕೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಹಂಚಿಕೊಂಡಿದೆ.
‘ಆಸ್ಟ್ರೇಲಿಯಾಕ್ಕೆ ಬಂದು ತಂಡಕ್ಕೆ ಆಡುತ್ತಿರುವ ಅವಕಾಶ ದೊರಕಿದ್ದು ಅದ್ಭುತ. ತಂಡದ ವಿಜಯಕ್ಕೆ ಕಾಣಿಕೆ ನೀಡಿರುವುದರಿಂದ ಅತೀವ ಸಂಸತವಾಗಿದೆ’ ಎಂದು 26 ವರ್ಷ ವಯಸ್ಸಿನ ಆಲ್‌ರೌಂಡರ್ ಅವರು ಪದಕ ಸ್ವೀಕರಿಸಿದ ನಂತರ ತಿಳಿಸಿದ್ದಾರೆ.
ಹೋಬಾರ್ಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೇಲಿನ ಕ್ರಮಾಂಕದಲ್ಲಿ ಆಡಿದ ಅವರು 23 ಎಸೆತಗಳಲ್ಲಿ 49 ರನ್ ಬಾರಿಸಿ ತಂಡದ ಪರ ಅತ್ಯಧಿಕ ಮೊತ್ತದ ಕಾಣಿಕೆ ನೀಡಿದ್ದರು. ನಾಲ್ಕನೇ ಟಿ20 ಪಂದ್ಯದ ಕೊನೆಯ ಗಳಿಗೆಯಲ್ಲಿ ಬೌಲಿಂಗ್ ಮಾಡಿ ಲಗುಬಗನೇ ಮೂರು ವಿಕೆಟ್ ಪಡೆದು ಆಸ್ಟ್ರೇಲಿಯಾ ಪತನ ತ್ವರಿತಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.