ADVERTISEMENT

15 ವರ್ಷಗಳ ಹಿಂದೆ | ಯುವರಾಜ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದು ಇದೇ ದಿನ

ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 8:15 IST
Last Updated 19 ಸೆಪ್ಟೆಂಬರ್ 2022, 8:15 IST
ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ವೈಖರಿ (ಪಿಟಿಐ ಚಿತ್ರ)
ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ವೈಖರಿ (ಪಿಟಿಐ ಚಿತ್ರ)   

ಭಾರತ ಕ್ರಿಕೆಟ್‌ ತಂಡ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್‌ ಸಿಂಗ್‌, ಟಿ20 ಕ್ರಿಕೆಟ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಇಂದಿಗೆ ಬರೋಬ್ಬರಿ 15 ವರ್ಷಗಳು ಕಳೆದಿವೆ.

ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿಯಲ್ಲೇ ಅಬ್ಬರಿಸಿದ್ದ ಯುವರಾಜ್‌, ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದರೊಂದಿಗೆ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟರ್‌ ಎನಿಸಿದ್ದರು. ಅಷ್ಟಲ್ಲದೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆಯನ್ನೂ ಬರೆದಿದ್ದರು. ಈಗಲೂ ಚುಟುಕು ಕ್ರಿಕೆಟ್‌ನ ವೇಗದ ಅರ್ಧಶತಕದ ದಾಖಲೆ ಅವರ ಹೆಸರಲ್ಲೇ ಇದೆ.

ಈ ಪಂದ್ಯವು2007ರ ಸೆಪ್ಟೆಂಬರ್‌ 19ರಂದುದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದಿತ್ತು.

ADVERTISEMENT

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಗೌತಮ್ ಗಂಭೀರ್‌ (58)ಮತ್ತು ವಿರೇಂದ್ರ ಸೆಹ್ವಾಗ್‌ (68) ತಲಾಅರ್ಧಶತಕ ಸಿಡಿಸಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಂತರ ಮೈದಾನದಲ್ಲಿ ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಯುವರಾಜ್‌, ರನ್‌ ಗತಿ ಹೆಚ್ಚಿಸಿದರು.

ಭಾರತದ ಇನಿಂಗ್ಸ್‌ನ 19 ಓವರ್‌ನ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವುದರೊಂದಿಗೆಕೇವಲ 16 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 3 ಬೌಂಡರಿ ಸಹಿತ 58 ರನ್ ಚಚ್ಚಿದರು. ಹೀಗಾಗಿ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ218 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ 6 ವಿಕೆಟ್‌ ಕಳೆದುಕೊಂಡು 200 ರನ್ ಗಳಿಸಿ ಪ್ರಬಲ ಪೈಪೋಟಿ ನೀಡಿತಾದರೂ, 18 ರನ್ ಅಂತರದ ಸೋಲೊಪ್ಪಿಕೊಂಡಿತು.

ತಾವು ಸಿಕ್ಸರ್‌ ಸಿಡಿಸಿದ್ದನ್ನು ಮಗನೊಂದಿಗೆ ಕುಳಿತು ನೋಡುತ್ತಿರುವ ವಿಡಿಯೊವನ್ನು ಯುವಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.