ADVERTISEMENT

ಮಹಿಳಾ ಬಿಗ್‌ಬ್ಯಾಷ್‌ ಲೀಗ್‌: ಥಂಡರ್‌ ಜಯದಲ್ಲಿ ಮಂದಾನ ಮಿಂಚು

ಶೆಫಾಲಿಗೆ ನಿರಾಸೆ

ಪಿಟಿಐ
Published 14 ನವೆಂಬರ್ 2021, 11:16 IST
Last Updated 14 ನವೆಂಬರ್ 2021, 11:16 IST
ಸ್ಮೃತಿ ಮಂದಾನ– ಟ್ವಿಟರ್ ಚಿತ್ರ
ಸ್ಮೃತಿ ಮಂದಾನ– ಟ್ವಿಟರ್ ಚಿತ್ರ   

ಮ್ಯಾಕೆ, ಆಸ್ಟ್ರೇಲಿಯಾ: ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಸಿಡ್ನಿ ಥಂಡರ್‌ ತಂಡವು ಭರ್ಜರಿ ಜಯ ಗಳಿಸಿತು.

ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ ಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸಿಡ್ನಿ ಸಿಕ್ಸರ್ಸ್ ತಂಡವನ್ನು ಸೋಲಿಸಿತು. ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಮಂದಾನ (45) ಅವರ 39 ಎಸೆತಗಳ ಇನಿಂಗ್ಸ್‌ನಲ್ಲಿ ಆರು ಬೌಂಡರಿಗಳಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಿಕ್ಸರ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಕೇವಲ 94 ರನ್‌ ಗಳಿಸಿತ್ತು. ಈ ತಂಡದಲ್ಲಿದ್ದ ಭಾರತದ ಶಫಾಲಿ ವರ್ಮಾ ಕೇವಲ 8 ರನ್‌ ಗಳಿಸಿದರು. ಎಲಿಸ್ ಪೆರಿ (40, 40ಎಸೆತ, 3 ಬೌಂಡರಿ) ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ತೋರಿದರು. ಥಂಡರ್ಸ್ ತಂಡವು 15.2 ಓವರ್‌ಗಳಲ್ಲಿ 96 ರನ್‌ ಗಳಿಸಿತು. ನಾಲ್ಕು ವಿಕೆಟ್ ಕಳೆದುಕೊಂಡಿತು.

ADVERTISEMENT

ಮಂದಾನ ಅವರು ಕೊರಿನ್‌ ಹಿಲ್ (19) ಜೊತೆಗೂಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 53 ರನ್‌ ಗಳಿಸಿದ್ದು, ತಂಡದ ಜಯದಲ್ಲಿ ಪ್ರಮುಖ ತಿರುವಾಯಿತು.

ಮತ್ತೊಂದು ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಎಂಟು ವಿಕೆಟ್‌ಗಳಿಂದ ಬ್ರಿಸ್ಬೇನ್ ಹೀಟ್‌ ತಂಡವನ್ನು ಸೋಲಿಸಿತು. ಬ್ರಿಸ್ಬೇನ್ ತಂಡದಲ್ಲಿದ್ದ ಭಾರತದ ಪೂನಮ್ ಯಾದವ್‌ 3.2 ಓವರ್ ಬೌಲ್ ಮಾಡಿ 19 ರನ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.