ADVERTISEMENT

ಏಕದಿನ ವಿಶ್ವಕಪ್‌ನತ್ತ ಚಿತ್ತ: ಮಿಥಾಲಿ ರಾಜ್

ಪಿಟಿಐ
Published 28 ಆಗಸ್ಟ್ 2021, 15:38 IST
Last Updated 28 ಆಗಸ್ಟ್ 2021, 15:38 IST
ಮಿಥಾಲಿ ರಾಜ್‌– ಪಿಟಿಐ ಚಿತ್ರ
ಮಿಥಾಲಿ ರಾಜ್‌– ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಪ್ರವಾಸವನ್ನು ಸೂಕ್ತ ಸಿದ್ಧತೆಯಾಗಿ ಬಳಸಿಕೊಳ್ಳಲಾಗುವುದು ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಕೋಚ್‌ ರಮೇಶ್ ಪೊವಾರ್ ಶನಿವಾರ ತಿಳಿಸಿದ್ದಾರೆ.

ಮೂರು ಏಕದಿನ ಪಂದ್ಯಗಳು, ಒಂದು ಟೆಸ್ಟ್ ಮತ್ತು ಮೂರು ಟಿ–20 ಪಂದ್ಯಗಳನ್ನು ಆಡಲು ಭಾರತ ತಂಡ ಬುಧವಾರ ಆಸ್ಟ್ರೇಲಿಯಾಕ್ಕೆ ತೆರಳುತ್ತಿದೆ.

‘ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾವು ಮೊದಲು ಏಕದಿನ ಪಂದ್ಯಗಳನ್ನು ಆಡಬೇಕಿದ್ದು, ವಿಶ್ವಕಪ್‌ ಟೂರ್ನಿಗೆ ಸಿದ್ಧತೆಯಾಗಿ ಪರಿಗಣಿಸುವೆವು. ಏಕೈಕ ಟೆಸ್ಟ್ ಪಂದ್ಯವನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು‘ ಎಂದು ಪತ್ರಿಕಾಗೋಷ್ಠಿಯಲ್ಲಿ ಪೊವಾರ್ ಹೇಳಿದರು.

ADVERTISEMENT

ಸೆಪ್ಟೆಂಬರ್ 19ರಿಂದ ಮೊದಲ ಏಕದಿನ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ. 2022ರ ಮಾರ್ಚ್‌–ಏಪ್ರಿಲ್‌ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ನಿಗದಿಯಾಗಿದೆ.

‘ನಮ್ಮ ಸಾಮರ್ಥ್ಯ ಯಾವ ಹಂತಗಳಲ್ಲಿ ಸುಧಾರಿಸಬೇಕು ಎಂಬುದರ ಕುರಿತು ಅರಿವಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆಸಿದ ಪೂರ್ವಸಿದ್ಧತಾ ಶಿಬಿರದಲ್ಲಿ ಚರ್ಚೆ ನಡೆಸಿದ್ದೇವೆ. ಆಸ್ಟ್ರೇಲಿಯಾದಲ್ಲಿ ಯಾವುದೇ ರೀತಿಯ ಫಲಿತಾಂಶ ಹೊರಹೊಮ್ಮಬಹುದು. ಇನ್ನೂ ಕೆಲವೇ ತಿಂಗಳು ದೂರ ಇರುವ ವಿಶ್ವಕಪ್ ಕುರಿತು ಗಮನವಹಿಸಲಾಗುವುದು‘ ಎಂದು ಮಿಥಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.